ಮುಳಿಯದಲ್ಲಿ ವಜ್ರಾಭರಣಗಳನ್ನು ಕೊಂಡಾಗ ೯೫%ರಷ್ಟು ವಿನಿಮಯ ಹಾಗೂ ೯೦% ರಷ್ಟು ಎಕ್ಸೇಂಜ್ ಸೌಲಭ್ಯ ಇರಲಿದೆ. ಹಾಗೆಯೇ ಐ.ಜಿ.ಐ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ವೇರ್ಣುಶರ್ಮ ತಿಳಿಸಿದರು.
ಲಕ್ಕಿ ಡ್ರಾ ಸಮಾರಂಭದಲ್ಲಿ ಮಾತನಾಡಿದ ಡಾಕ್ಟರ್ ಚೇತನ್ ಜಿ. ಡಿ., ಮುಳಿಯ ಕಳೆದ ೮ ದಶಕಗಳಿಂದ ಸಮಾಜಸೇವೆಯ ಜೊತೆಗೆ ವ್ಯವಹಾರ ಮಾಡುತ್ತಾ ಪಾರದರ್ಶಕತೆಯನ್ನು ಉಳಿಸಿ ನಂಬಿಕೆ ಪಡೆದ ಸಂಸ್ಥೆಯಾಗಿದೆ ಎಂದರು.
ವೇದಿಕೆಯಲ್ಲಿ ಶಾಖಾ ಉಪ ಪ್ರಬಂಧಕ ಚಂದ್ರಶೇಖರ್ ಹಾಗೂ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಉಪಸ್ಥಿತರಿದ್ದರು. ಮಂಜುಳಾ ಸ್ವಾಗತಿಸಿದರು.
ಮಡಿಕೇರಿ, ಫೆ. ೧೧: ಮಡಿಕೇರಿ ಮುಳಿಯ ಜ್ಯುವೆಲ್ಲರಿಯಲ್ಲಿ ವಜ್ರದ ಆಭರಣಗಳನ್ನು ಖರೀದಿಸಿದ ಅದೃಷ್ಟಶಾಲಿಯಾಗಿ ಮಾಚೆಟ್ಟಿರ ಸುಜ್ಯೋತಿ ಕುಶಾಲಪ್ಪ ಮಾರುತಿ ಸೆಲೆರಿಯೋ ಕಾರನ್ನು ಗೆದ್ದು ವಿಜೇತರಾದರು. ದೇಶದ ಪ್ರತಿಷ್ಠಿತ ವಜ್ರಾಭರಣಗಳ ಕಿಸ್ನ ಕಂಪನಿಯಿAದ ಈ ಬಹುಮಾನ ನೀಡಲಾಯಿತು.