ಮಡಿಕೇರಿ, ಫೆ. ೧೨: ತರಗತಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಳಿಬೀಡು ಗ್ರಾಮದ ಜವಹಾರ್ ನವೋದಯ ವಿದ್ಯಾಸಂಸ್ಥೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ. ಎ. ಆನಂದ್ ಅವರ ಪುತ್ರ ಅದೇ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಎಂ.ಎ. ಅಮಿತ್ (೧೭) ನಾಪತ್ತೆಯಾಗಿರುವ ಯುವಕ.

ನಾಪತ್ತೆಯಾಗಿರುವ ಯುವಕನ ಕುಟುಂಬ ಶಾಲೆಯ ವಸತಿ ಗೃಹದಲ್ಲಿ ವಾಸವಾಗಿದ್ದು, ತಾ. ೧೧ ರಂದು ಎಂದಿನAತೆ ಬೆಳಿಗ್ಗೆ ೭ ಗಂಟೆಗೆ ತರಗತಿಗೆಂದು ಅಮಿತ್ ತೆರಳಿದ್ದು, ಮಧ್ಯಾಹ್ನ ೧೨.೧೫ರ ಸುಮಾರಿಗೆ ಶಾಲೆಯ ಭದ್ರತಾ ಸಿಬ್ಬಂದಿ ಅಮಿತ್ ತಂದೆಗೆ ಕರೆ ಮಾಡಿ ‘ನಿಮ್ಮ ಮಗ ಶಾಲೆಯಿಂದ ಹೊರಹೋಗಿರುವುದಾಗಿ’ ತಿಳಿಸಿದ್ದಾರೆ. ತಕ್ಷಣ ತೆರಳಿ ನೋಡಿದಾಗ ಅಮಿತ್ ಇರಲಿಲ್ಲ. ತರಗತಿಗೆ ತೆರಳಿ ವಿಚಾರಿಸಿದಾಗ ಶಿಕ್ಷಕರೊಬ್ಬರು ‘ಇಂಗ್ಲೀಷ್ ನೋಟ್ಸ್ ತರುವಂತೆ ತಿಳಿಸಿದ ವೇಳೆ ಮನೆಗೆ ಹೋಗಿ ಬರುವುದಾಗಿ ಹೇಳಿ ಅಮಿತ್ ತೆರಳಿದ್ದಾನೆ’ ಎಂದು ಮಾಹಿತಿ ದೊರೆತಿದೆ. ಕುಟುಂಬಸ್ಥರನ್ನೂ ವಿಚಾರಿಸಿದ ಸಂದರ್ಭವೂ ಆತನ ಸುಳಿವು ಲಭ್ಯವಾಗದ ಹಿನ್ನೆಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಇದರನ್ವಯ ಪ್ರಕರಣ ದಾಖಲಾಗಿದೆ.

ಯುವಕನ ಸುಳಿವು ದೊರೆತಲ್ಲಿ ೦೮೨೭೨-೨೨೯೦೦೦, ೨೨೮೭೭೭ ಸಂಖ್ಯೆಗೆ ಸಂಪರ್ಕಿಸುವAತೆ ಪೊಲೀಸರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.