ಮಡಿಕೇರಿ,ಫೆ.೧೧: ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯಕ್ಕೆ ಸಂಬAಧಿಸಿದAತೆ ರಚಿಸಲಾಗಿರುವ ಬೈಲಾದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಕಟ್ಟೆಮಾಡು ದೇವಾಲಯದ ವಾರ್ಷಿಕ ಉತ್ಸವ ಸಂದರ್ಭ ವಸ್ತçಸಂಹಿತೆ ಕುರಿತಂತೆ ಉಂಟಾದ ಗೊಂದಲದಿAದಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಒಂದು ನಿರ್ಧಾರಕ್ಕೆ ಬರಲು ಜಿಲ್ಲಾಧಿಕಾರಿಗಳು ಫೆ.೧೦ರವರೆಗೆ ಕಾಲಾವಕಾಶ ನೀಡಿದ್ದರು. ಅದರಂತೆ ದೇವಾಲಯ ಸಮಿತಿಯವರು ಹಾಗೂ ಕುಲವಾರು ಸಮಿತಿಯವರು ತಾ.೮ರಂದು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದರು. ಈ ತೀರ್ಮಾನದ ವರದಿಯನ್ನು ಇಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಕಾನೂನು ಪ್ರಕಾರ ತೀರ್ಮಾನ
ವರದಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು; ಕಟ್ಟೆಮಾಡು ದೇವಾಲಯದಲ್ಲಿ ಉಂಟಾದ ಗೊಂದಲವನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು, ಅದರಂತೆ ದೇವಾಲಯ ಸಮಿತಿಯ ೧೩ ಮಂದಿ, ಇತರ ಕುಲವಾರು ಸಮಿತಿಯವರು ಸೇರಿದಂತೆ ೪೬ ಮಂದಿ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಲಿಖಿತವಾಗಿ ಸಲ್ಲಿಸಿದ್ದಾರೆ. ವರದಿಯಲ್ಲಿ ಬಹುಮತದ ತೀರ್ಮಾನದಂತೆ ಈಗಾಗಲೇ ರಚಿಸಲಾಗಿರುವ ಬೈಲಾದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ವೆಂದು ಎಲ್ಲಾ ಸಮುದಾಯದವರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಕಾನೂನು ಪ್ರಕಾರವಾಗಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ದೇವಾಲಯದಲ್ಲಿ ಯಾವುದೇ ಸಾಂಪ್ರದಾಯಿಕ ಉಡುಪುಗಳಿಗೆ ಅವಕಾಶವಿಲ್ಲವೆಂದು ಬೈಲಾದಲ್ಲಿ ಇದೆ ಎಂದು ಹೇಳಿದರು. ನಿಷೇಧಾಜ್ಞೆ ಮುಂದಿನ ಮಾರ್ಚ್ ೧೩ರವರೆಗೆ ಮುಂದುವರಿಯಲಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾನೂನು ವ್ಯವಸ್ಥೆ ಕಾಪಾಡಲಾಗು ವದೆಂದು ಹೇಳಿದರು.
ನಿಯಮ ಪಾಲನೆ
ಮಾಧ್ಯಮದವರೊಂದಿಗೆ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ; ಜಿಲ್ಲಾಧಿಕಾರಿಗಳು ನೀಡಿದ್ದ ಕಾಲಾವಕಾಶದೊಳಗಡೆ ಸಭೆ ನಡೆಸಲಾಗಿದೆ. ಸಭೆಯ ವಿವರವನ್ನು ಇದೀಗ ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಪರ-ವಿರೋಧದ ತೀರ್ಮಾನದ ಬಗ್ಗೆಯೂ ವರದಿ ಸಲ್ಲಿಸಿದ್ದೇವೆ. ಸಭೆಯಲ್ಲಿನ ತೀರ್ಮಾನದ ಪ್ರಕಾರ ಬೈಲಾದಲ್ಲಿನ ನಿಯಮಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾವದೇ ಕಾರಣಕ್ಕೂ ಯಾವದೇ ಸಮುದಾಯದವರಿಗೂ ಸಾಂಪ್ರದಾಯಿಕ ಉಡುಪು ಧರಿಸಲು ಅವಕಾಶವಿಲ್ಲ. ನಿಯಮ ಪಾಲನೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಿಲುವಿಗೆ ಬದ್ಧರಾಗಿರುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಸದಸ್ಯರುಗಳಾದ ಅಪ್ಪೆಯಂಡ್ರ ಮಣಿ ಮುತ್ತಪ್ಪ, ಎಂ.ಪಿ.ದೇವಪ್ಪ, ಹೆಚ್.ಎಸ್. ಪುರುಷೋತ್ತಮ, ಡಾಲು ಕುಮಾರ, ಬಿ.ಪಿ. ಬಾಲಕೃಷ್ಣ, ಎಂ.ಟಿ. ದೇವಪ್ಪ, ಬಿದ್ರುಪಣೆ ಚೇತನ್, ಪೋತಂಡ್ರ ದೇವಿಪ್ರಸಾದ್, ಕಟ್ಟೆಮನೆ ಪುರುಷೋತ್ತಮ, ಬೇಬಿ ಕುಸಲ ಹಾಗೂ ಗ್ರಾಮಸ್ಥರು ಇದ್ದರು.
ಘಟನೆ ಹಿನ್ನೆಲೆ
೨೦೨೩ರಲ್ಲಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ಪೂರ್ಣಗೊಂಡ ಬಳಿಕ ಕಳೆದ ೨೦೨೪ರ ಡಿಸೆಂಬರ್ ೨೩ರಿಂದ ೨೭ರವರೆಗೆ ವಾರ್ಷಿಕ ಉತ್ಸವ ನಡೆಯಿತು. ಉತ್ಸವದ ಕೊನೆಯ ದಿನವಾದ ೨೭ರ ಸಂಜೆ ವೇಳೆ ದೇವರು ಜಳಕಕ್ಕೆ ಹೊರಡುವ ಸಂದರ್ಭದಲ್ಲಿ ಊರಿನ ಕೊಡವ ಸಮುದಾಯದ ಕೆಲವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯದೊಳಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ಸಂದರ್ಭ ದೇವಾಲಯ ಸಮಿತಿಯವರು ಈ ದೇವಾಲಯದ ಬೈಲಾ ಹಾಗೂ ಕಟ್ಟುಪಾಡುಗಳ ಪ್ರಕಾರ ಯಾವುದೇ ಸಮುದಾಯದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅವಕಾಶವಿರುವುದಿಲ್ಲವೆಂದು ಮನವರಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಾದ ವಿವಾದ ನಡೆದು ಪರಿಸ್ಥಿತಿ ಘರ್ಷಣೆಯ ಹಂತಕ್ಕೆ ತಲಪುತ್ತಿದ್ದಂತೆ ಪೊಲೀಸರ ಪ್ರವೇಶವಾಗಿದೆ.
ನಿಷೇಧಾಜ್ಞೆ
ದೇವಾಲಯ ಬಳಿ ಹಾಗೂ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಲಾಯಿತು. ಪ್ರಕರಣವನ್ನು ಬಗೆಹರಿಸಿಕೊಳ್ಳಲು ಒಂದು ವಾರದ ಗಡುವು ಕೇಳಿದ್ದ ದೇವಾಲಯದ ಆಡಳಿತ ಮಂಡಳಿಯವರು ಒಂದು ವಾರದ ಬಳಿಕ ಸಭೆ ನಡೆಸಿದರಾದರೂ ತೀರ್ಮಾನ ಸರಿಯಾಗದ ಕಾರಣ ಜಿಲ್ಲಾಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಫೆ.೧೦ರವರೆಗೆ ಕಾಲಾವಕಾಶ ನೀಡಿದ್ದರು.
ಮೆರವಣಿಗೆ-ಜಾಥಾ
ಇದೇ ವೇಳೆ ಪ್ರಕರಣ ಜಾತೀಯ ಬಣ್ಣ ಪಡೆದುಕೊಂಡು ಗೌಡ ಹಾಗೂ ಕೊಡವ ಜನಾಂಗದ ನಡುವೆ ಶೀತಲ ೩ಆರನೇ ಪುಟಕ್ಕೆ (ಮೊದಲ ಪುಟದಿಂದ) ಸಮರಕ್ಕೂ ಕಾರಣವಾಯಿತು. ಪರಸ್ಪರ ಹೇಳಿಕೆಗಳು, ಪತ್ರಿಕಾಗೋಷ್ಠಿಗಳು, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳು ಬರತೊಡಗಿದವು. ಜನಾಂಗೀಯ ನಿಂದನೆಯ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ಕೂಡ ನೀಡಿತ್ತು. ಈ ನಡುವೆ ಅರೆಭಾಷೆ ಗೌಡ ಜನಾಂಗದ ನಿಂದನೆ ಮಾಡಿದ ಕಾರಣಕ್ಕಾಗಿ ಸಿಎನ್ಸಿ ಅಧ್ಯಕ್ಷ ನಾಚಪ್ಪ ಅವರನ್ನು ಬಂದಿಸುವAತೆ ಆಗ್ರಹಿಸಿ ಅರೆಭಾಷೆ ಗೌಡ ಸಮುದಾಯದವರು ಮಡಿಕೇರಿಯಲ್ಲಿ ಮೌನ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಈ ನಡುವೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕೊಡವ ಸಮಾಜ ಹಾಗೂ ಕೊಡವ ಭಾಷಿಕ ಜನಾಂಗದವರು ತಮ್ಮ ಸಂಸ್ಕೃತಿ, ಪದ್ಧತಿ ಆಚಾರ, ವಿಚಾರ, ಉಡುಪುಗಳ ಹಕ್ಕಿಗಾಗಿ ಆಗ್ರಹಿಸಿ ಕಳೆದ ತಾ. ೨ರಿಂದ ಕುಟ್ಟದಿಂದ ಕಾಲ್ನಡಿಗೆ ಜಾಥಾ ನಡೆಸಿ ತಾ.೭ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾ ನಡೆಸಿದರು. ಇದೀಗ ಜಿಲ್ಲಾಡಳಿತ ನೀಡಿದ ಕಾಲಾವಕಾಶ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇವಾಲಯ ಸಮಿತಿಯವರು ಸಭೆ ನಡೆಸಿ ಸಭೆಯ ವಿವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿದ್ದಾರೆ.