ಕುಶಾಲನಗರ, ಫೆ.೧೧: ಕುಶಾಲನಗರದ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ೧೧ ನೇ ವರ್ಷದ ವಾರ್ಷಿಕೋತ್ಸವ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಿತು. ಪಟ್ಟಣದ ರಥ ಬೀದಿಯ ದೇವಾಲಯದಲ್ಲಿ ಬೆಳಿಗ್ಗೆ ೬.೩೦ ಕ್ಕೆ ವಾಸವಿ ಸುಪ್ರಭಾತ, ೭.೩೦ ಕ್ಕೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಗೋ ಪೂಜೆ, ಧ್ವಜಾರೋಹಣ, ಕಲಸ ಸ್ಥಾಪನೆ, ಪಂಚಾಮೃತ ಅಭಿಷೇಕ, ನಂತರ ಚಂಡಿಕಾ ಹೋಮ, ಕಲಾತ್ವತ ಹೋಮ, ಕಲಸ ಪೂಜೆ, ಮಧ್ಯಾಹ್ನ ೧ ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಅರ್ಚಕರಾದ ಗಿರೀಶ್ ಭಟ್ ಮತ್ತು ಯೋಗೀಶ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.

ಸಂಜೆ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮಗಳು ನಡೆದವು. ರಾತ್ರಿ ದೀಪಾರಾಧನೆ, ಪ್ರಾಕಾರೋತ್ಸವ, ಮಹಾಪೂಜೆ, ಅಷ್ಟಾವಧಾನ, ಮಂತ್ರ ಪುಷ್ಪ, ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಗಳು ನೆರವೇರಿದವು.

ಆರ್ಯವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷ ಉದಯ್‌ಕುಮಾರ್ , ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷಿö್ಮÃ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ವಾಸವಿ ಯುವಕ ಸಂಘ, ಯುವತಿಯರ ಸಂಘ ಪದಾಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.