ಮಡಿಕೇರಿ:, ಫೆ. ೧೧: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಚುನಾವಣೆ ತಾ.೧೬ ರಂದು ನಡೆಯಲಿದ್ದು, ೧೫ ನಿರ್ದೇಶಕರ ಸ್ಥಾನಗಳ ಪೈಕಿ ೧೧ ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನುಳಿದ ೪ ಮಂದಿಯ ಆಯ್ಕೆ ಮತದಾನದ ಮೂಲಕ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ ದೇವಯ್ಯ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಈ ಹಿಂದೆ ರೂ.೨೪ ಕೋಟಿ ಸಾಲದಲ್ಲಿತ್ತು. ಇದೀಗ ಆ ಮೊತ್ತ ರೂ.೧೨.೫ ಕೋಟಿ ತಲುಪಿದೆ. ಈ ಹಿಂದಿನ ಅವಧಿಯಲ್ಲಿ ಸಂಘದ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಂಘದಿAದ ಭಾರತೀಯ ಕಾಫಿ ಮಂಡಳಿಗೆ ಪಾವತಿಸಬೇಕಾಗಿದ್ದ ೧ ಕೋಟಿ ೫೫ ಲಕ್ಷ ರೂ. ಅಸಲನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಹಿಂದಿನ ಸಾಲ ತೀರುವಳಿಗಾಗಿ ಈಗ ಪ್ರತಿ ತಿಂಗಳು ೩ ಲಕ್ಷ ೧೧ ಸಾವಿರ ರೂ.ಗಳನ್ನು ಪಾವತಿಸಲಾಗುತ್ತಿದೆ.

ಸಂಘದ ಮಡಿಕೇರಿಯಲ್ಲಿರುವ ಮುಖ್ಯ ಕಛೇರಿಯ ಕಟ್ಟಡ ಮಳೆಗಾಲದಲ್ಲಿ ಸಂಪೂರ್ಣ ನೀರು ಸೋರುತ್ತಿದ್ದು, ಈ ಕಾರಣದಿಂದ ಕೆಲವು ಕಚೇರಿಗಳು ಸಹ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊAಡಿದ್ದವು. ಅದಕ್ಕಾಗಿ ತುರ್ತಾಗಿ ಕಟ್ಟಡಕ್ಕೆ ಮೇಲ್ಟಾವಣೆ ಹಾಕಿಸಿ ಕೆಲವು ದುರಸ್ತಿ ಕೆಲಸಗಳನ್ನು ಸಹ ಮಾಡಿ ಪೈಂಟಿAಗ್ ಮಾಡಿಸಿ ಕಟ್ಟಡವನ್ನು ಸುಸ್ಥಿತಿಗೆ ತರಲಾಗಿದೆ. ಹುಣಸೂರು ಮತ್ತು ಹೆಬ್ಬಾಲೆಯಲ್ಲಿರುವ ಆಸ್ತಿಗಳ ರಕ್ಷಣೆಗಾಗಿ ಸರ್ವೆ ಕಾರ್ಯ ನಡೆಸಿ ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಹೆಬ್ಬಾಲೆಯಲ್ಲಿ ನೂತನ ಪೆಟ್ರೋಲ್ ಬಂಕ್ ಅನ್ನು ಆರಂಭಿಸಲಾಗಿದ್ದು, ಇದರ ಆವರಣದಲ್ಲಿ ಇಂರ‍್ಲಾಕ್ ಅನ್ನು ಸಹ ಅಳವಡಿಸಲಾಗಿದೆ. ಹುಣಸೂರಿನಲ್ಲಿರುವ ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ಸುಮಾರು ೫೫ ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದರು. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಚುನಾವಣೆ ಸಮೀಪಿಸುವಾಗ ಸಂಘದ ಸದಸ್ಯರಾದ ಎಂ.ಕೆ ಅಪ್ಪಚ್ಚು ಹಾಗೂ ಟಿ.ಎಂ ಸೋಮಯ್ಯ ಅವರುಗಳು ಟೀಕಿಸಿರುವುದು ಸರಿಯಲ್ಲ ಎಂದರು.

ಸಂಘದ ಉಪಾಧ್ಯಕ್ಷ ಪೊನ್ನಪ್ಪ ಅವರು ಮಾತನಾಡಿ, ಸಂಘದಲ್ಲಿ ೬,೦೦೦ ಕ್ಕೂ ಮಿಗಿಲು ಸದಸ್ಯರಿದ್ದರೂ ಹೆಚ್ಚಿನ ಮಂದಿ ಇಲ್ಲಿ ವ್ಯವಹಾರವೇ ಮಾಡುವುದಿಲ್ಲ. ಈ ಕಾರಣದಿಂದಾಗಿ ಕೇವಲ ೪೮೭ ಮಂದಿಗೆ ಮತದಾನಕ್ಕೆ ಅವಕಾಶವಿದೆ. ಮತದಾನದಲ್ಲಿ ಭಾಗವಹಿಸಬೇಕಾದರೆ ಇಂತಿಷ್ಟು ವ್ಯಾಪಾರ, ಇಂತಿಷ್ಟು ಪೆಟ್ರೋಲ್ ಖರೀದಿ ಇತ್ಯಾದಿ ಷರತ್ತುಗಳಿವೆ. ಈ ಬಗ್ಗೆ ಎಲ್ಲಾ ಸದಸ್ಯರಿಗೆ ಮನವರಿಕೆ ಮಾಡಲಾಗಿದೆ ಎಂದರು.

ಸಂಘದ ನಿರ್ದೇಶಕ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಸಂಘವು ಸಾಲದಲ್ಲಿ ಸಿಲುಕಿದ್ದರೂ ವಾರ್ಷಿಕವಾಗಿ ಲಾಭವನ್ನು ದಾಖಲಿಸುತ್ತಿದೆ. ಸಂಘದ ಸದಸ್ಯರ ಸಲಹೆಯನ್ನು ಸ್ವೀಕಾರ ಮಾಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಮಹೇಶ್ ಹಾಜರಿದ್ದರು.