ಕೂಡಿಗೆ, ಫೆ. ೧೨: ದ್ವಿತೀಯ ವರ್ಷದ ಸಂಸ್ಥಾಪನಾ ದಿನಾಚರಣೆಯ ಹೊಸ್ತಿಲಿನಲ್ಲಿರುವ ಕೊಡಗು ವಿಶ್ವವಿದ್ಯಾಲಯವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಮ್ಯಾಸಚೂಸೆಟ್ಸ್ ನಲ್ಲಿರುವ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ನಡುವೆ ಬೆಂಗಳೂರಿನಲ್ಲಿ ಜರುಗಿದ ಅಕಾಡೆಮಿಕ್ ಅಲಯನ್ಸಸ್ ಕಾರ್ಯಕ್ರಮದಲ್ಲಿ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ಅಧ್ಯಕ್ಷ ಫ್ರೆಡ್ರಿಕ್ ಕ್ಲಾರ್ಕ್ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಜಂಟಿ ಒಡಂಬಡಿಕೆಗೆ ಸಹಿ ಹಾಕಿದರು
ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಅಮೇರಿಕಾದ ಮ್ಯಾಸಚೂಸೆಟ್ಸ್ನಲ್ಲಿರುವ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ಯಲ್ಲಿ ಉನ್ನತ ಅಧ್ಯಯನ ಮತ್ತು ತರಬೇತಿ ಪಡೆಯಲು ಈ ಒಡಂಬಡಿಕೆ ಸಹಕಾರಿಯಾಗಲಿದೆ. ಅದರ ಜೊತೆಗೆ ಕೊಡಗು ವಿಶ್ವವಿದ್ಯಾಲಯವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಮ್ಯಾಸಚೂಸೆಟ್ಸ್ ನಲ್ಲಿರುವ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ಸಹಯೋಗ ದೊಂದಿಗೆ ಅಂತರರಾಷ್ಟಿçÃಯ ಮಟ್ಟದ ಸಂಶೋಧನಾ ಮತ್ತು ಸಮ್ಮೇಳನಗಳನ್ನು ಆಯೋಜಿಸಲು ಅನುವು ಮಾಡಿ ಕೊಡಲಿದ್ದು, ವಿಶ್ವವಿದ್ಯಾಲಯಗಳ ನಡುವೆ ಜಂಟಿ ಪದವಿ ಕೋರ್ಸ್ ಗಳನ್ನು ಆರಂಭಿಸಲು ಸಹಕಾರಿ ಯಾಗಲಿದೆ. ಈ ಜಂಟಿ ಒಡಂಬಡಿಕೆಯ ಸಂದರ್ಭದಲ್ಲಿ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ಅಧ್ಯಕ್ಷರು ಮತ್ತು ಅವರ ನಿಯೋಗವು ಉಪಸ್ಥಿತರಿದ್ದರು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ತಿಳಿಸಿದರು.
ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಸಂಶೋಧನೆ, ಬೋಧನೆ, ಕೌಶಲ್ಯಭಿವೃದ್ಧಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಕರ್ನಾಟಕದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಮತ್ತು ಕರ್ನಾಟಕ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರಿನ ಫೋರ್ಕ್ ಟೆಕ್ನಾಲಜಿಸ್ ಸಹಯೋಗದೊಂದಿಗೆ ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕರುಗಳಿಗೆ ಕೌಶಲಾಭಿವೃದ್ಧಿ ಕಾರ್ಯಾಗಾರಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲದೇ ಧಾರವಾಡದ ಬಹು ಶಾಸ್ತಿçÃಯ ವಿಕಾಸ ಸಂಶೋಧನಾ ಕೇಂದ್ರ, ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದಿನ ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಹಾಗೂ ಪ್ರಾಜೆಕ್ಟ್ ಕಾವೇರಿ ಎಂಬ ಹೆಸರಿನಲ್ಲಿ ಕೊಡಗು ಅಂಚೆ ಇಲಾಖೆಯ ಜೊತೆಗಿನ ಒಡಂಬಡಿಕೆ, ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಷ್ಟಿçÃಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ, ಐಸಿಎಆರ್-ಐಐಎಸ್‌ಆರ್, ಕೋಜಿಕೊಡೆ, ಕೇರಳ ಹಾಗೂ ಐಬಿಎಂ ಅನುದೀಪ್ ಫೌಂಡೇಶನ್, ಬೆಂಗಳೂರು ಮೊದಲಾದ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಸಂಸ್ಥೆಗಳ ಜೊತೆಗೆ ಕೊಡಗು ವಿಶ್ವವಿದ್ಯಾಲಯವು ಈಗಾಗಲೇ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.