ಮಡಿಕೇರಿ, ಫೆ. ೧೨: ಮಡಿಕೇರಿ ಕೊಡವ ಸಮಾಜ ಕಟ್ಟಡದಲ್ಲಿರುವ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರುಗಳ ಆಯ್ಕೆ ಅವಿರೋಧವಾಗಿ ನಡೆದಿದೆ.
ಈ ಹಿನ್ನೆಲೆ ತಾ.೧೩ ರಂದು (ಇಂದು) ನಡೆಯಬೇಕಿದ್ದ ಚುನಾವಣೆ ರದ್ದುಗೊಂಡಿದೆ. ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾಗಿ ಚೆರುಮಂದAಡ ಜಿ. ಪೊನ್ನಪ್ಪ, ಚೋವಂಡ ಡಿ. ಕಾಳಪ್ಪ, ಕಾಂಡೆರ ಯು. ಕುಟ್ಟಪ್ಪ, ಕುಡುವಂಡ ಬಿ. ಉತ್ತಪ್ಪ, ಕೊಂಗಾAಡ ಎ. ತಿಮ್ಮಯ್ಯ, ಮೇದುರ ಪಿ. ಕಾವೇರಪ್ಪ, ಮಂಡುವAಡ ಪಿ. ಮುತ್ತಪ್ಪ, ನಂದೇಟಿರ ಪಿ. ರಾಜ ಮಾದಪ್ಪ, ಸುಣ್ಣುವಂಡ ಎಂ. ಕಾವೇರಪ್ಪ, ಯಂ.ಜಿ. ಉಷಾ, ನಾಪನೆರವಂಡ ಎ. ಪೊನ್ನಮ್ಮ, ಕೇಕಡ ಎಂ. ಸುಗುಣ, ಶಾಂತೆಯAಡ ಡಿ. ದೇವರಾಜ್ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಜಯ್ ಪಿ. ಕುರುಳಪ್ಪೆ ಪ್ರಕಟಿಸಿದ್ದಾರೆ.