ಮಡಿಕೇರಿ, ಫೆ. ೧೧: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ತಾ. ೨ರಿಂದ ತಾ.೭ರವರೆಗೆ ಕೊಡವ ಜನಾಂಗದ ಸಂಸ್ಕೃತಿಯ ಉಳಿವಿಗೆ ನಡೆದ ಜಾಥಾವು ಶಾಂತಿಯುತವಾಗಿ, ಯಾವುದೇ ಜನಾಂಗದ ನಿಂದನೆ ಇಲ್ಲದೆ ನಡೆದಿರುವುದು ಸ್ವಾಗತಾರ್ಹ. ಆದರೆ ಕೊನೆಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವಾಗ ಕೊಡಗಿನ ಅರೆಭಾಷಿಕ ಒಕ್ಕಲಿಗ ಗೌಡ ಜನಾಂಗದವರನ್ನು ಹಾಗೂ ಪರೋಕ್ಷವಾಗಿ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಅವರನ್ನು ಅನಾಮಧೇಯ ವ್ಯಕ್ತಿ ಎಂದು ಬಿಂಬಿಸಿ ನಿಂದನೆ ಮಾಡಿರುವುದನ್ನು ಕೊಡಗಿನ ಗೌಡ ಸಮಾಜಗಳ ಒಕ್ಕೂಟ ಖಂಡಿಸುವುದಾಗಿ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಹೇಳಿದರು.

ಇಂದು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾವು ಮೇಲ್ನೋಟಕ್ಕೆ ಕೊಡವರ ಸಂಸ್ಕೃತಿ ಉಳಿವಿಗೆ ನಡೆದಿದ್ದು, ಮನವಿಯಲ್ಲಿನ ಅಂಶಗಳನ್ನು ಗಮನಿಸಿದರೆ ಅರೆಭಾಷಿಕ ಒಕ್ಕಲಿಗ ಗೌಡರನ್ನು ದೂಷಿಸಲೆಂದೇ ಜಾಥಾ ಮಾಡಿರುವ ಸಂಶಯವಿದೆ ಎಂಬುದಾಗಿ ಅಭಿಪ್ರಾಯಿಸಿದರು. ಜ.೨೦ ರಂದು ಮಡಿಕೇರಿಯಲ್ಲಿ ಗೌಡ ಯುವ ಒಕ್ಕೂಟದಿಂದ ಪ್ರತಿಭಟನೆ ನಡೆದಿದ್ದು, ಗೌಡ ಜನಾಂಗದ ವಿರುದ್ಧ ಸಿ.ಎನ್.ಸಿ ಸಂಘಟನೆ ಮಾಡಿದ ಅವಹೇಳನವನ್ನು ಖಂಡಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಗೌಡ ಜನಾಂಗದವರನ್ನು ನಿಂದಿಸಿದವರ ಬಂಧನಕ್ಕೆ ಆಗ್ರಹಿಸಲಾಯಿತಷ್ಟೆ ಹೊರತು ಕೊಡವ ಜನಾಂಗದ ವಿರುದ್ಧ ಪ್ರತಿಭಟನೆ ನಡೆಸಿಲ್ಲ ಎಂದು ಅವರು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಖಜಾಂಚಿ ಆನಂದ ಕರದ್ಲಾಂಜೆ ಅವರು ಮಾತನಾಡಿ, ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದ ವಿಚಾರ ಅಲ್ಲಿನ ಸ್ಥಳೀಯರು, ಊರಿನವರು ಹಾಗೂ ಆಡಳಿತ ಮಂಡಳಿಗೆ ಬಿಟ್ಟಿದ್ದು. ಈ ವಿಷಯದಲ್ಲಿ ಇಡೀ ಗೌಡ ಜನಾಂಗವನ್ನೇ ನಿಂದಿಸುವುದು. ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸಮಂಜಸವಲ್ಲ. ನಾವು ಪ್ರತಿಭಟನೆ ಮಾಡಿದ್ದ ಉದ್ದೇಶವು ಒಂದು ಸಂಘಟನೆಯ ವಿರುದ್ಧ ಹೊರತು ಇಡೀ ಜನಾಂಗದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿರು.

ಸುದ್ದಿಗೋಷ್ಠಿಯಲ್ಲಿ ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ನಿರ್ದೇಶಕ ತಳೂರು ದಿನೇಶ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಹಾಜರಿದ್ದರು.

ಕೊಡಗಿನ ಅರೆಭಾಷಿಕ ಒಕ್ಕಲಿಗ ಗೌಡರ ನಿಲುವು - ಗೌಡ ಸಮಾಜಗಳ ಒಕ್ಕೂಟ ತೀರ್ಮಾನ

* ಕೊಡಗಿನಲ್ಲಿ ಸರ್ವ ಜನಾಂಗದವರೊAದಿಗೆ ಸಾಮರಸ್ಯದಿಂದ ಜೀವಿಸುತ್ತಿರುವ ಅರೆಭಾಷೆ ಒಕ್ಕಲಿಗರ ವಿರುದ್ಧ ವಿನಾಕಾರಣ ಹೆಜ್ಜೆ ಹಾಕಿದವರ ಜೊತೆ ಮುಂದಿನ ದಿನಗಳಲ್ಲಿ ಅಂತರ ಕಾಪಾಡಿಕೊಳ್ಳಲಾಗುವುದು.

* ಕೊಡಗಿನ ಅರೆಭಾಷೆ ಒಕ್ಕಲಿಗರಿಗೆ ಅನಾದಿಕಾಲದಿಂದಲೂ ತನ್ನದೇ ಆದ ಆಚಾರ- ವಿಚಾರ, ಸಂಸ್ಕೃತಿ ಮತ್ತು ಉಡುಗೆ ತೊಡುಗೆಗಳಿವೆ. ಅದನ್ನು ಆಚರಿಸಲು, ತೊಡಲು ಯಾರ ಅನುಮತಿಯ ಅವಶ್ಯಕತೆ ಅರೆಭಾಷೆ ಒಕ್ಕಲಿಗರಿಗೆ ಇರುವುದಿಲ್ಲ. ಇದೇ ತಿಂಗಳ ೭ನೇ ತಾರೀಕು ಮಡಿಕೇರಿಯಲ್ಲಿ ನಡೆದ ಕೊಡವ ಜನಾಂಗದ ಸಭೆಯ ಮನವಿ ಪತ್ರದಲ್ಲಿ ನಮ್ಮ ಮೇಲೆ ಮಾಡಿದ ಕ್ಷÄಲ್ಲಕ ಆರೋಪಗಳು ಆಧಾರ ರಹಿತವಾಗಿದ್ದು ಇದನ್ನು ನಾವು ಖಂಡಿಸುತ್ತೇವೆ.

* ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದ ಆಚಾರ-ವಿಚಾರದ ಕುರಿತಾಗಿ ಯಾವುದೇ ಚರ್ಚೆ ಅಥವಾ ಮಾತುಕತೆಗೆ ಅರೆಭಾಷೆ ಒಕ್ಕಲಿಗರ ಸಮಾಜ ಮತ್ತು ಫೆಡರೇಶನ್ ಭಾಗವಹಿಸುವುದಿಲ್ಲ. ಅದು ಅವರ ಗ್ರಾಮಕ್ಕೆ ಮತ್ತು ಆಡಳಿತ ಮಂಡಳಿಗೆ ಸಂಬAಧಿಸಿದ್ದಾಗಿರುತ್ತದೆ. ಅದರ ಬಗ್ಗೆ ಆಕ್ಷೇಪವಿರುವವರು ನ್ಯಾಯಾಲಯದ ಮೊರೆ ಹೋಗಲು ಯಾರದೇ ಅಭ್ಯಂತರ ಇರುವುದಿಲ್ಲ. ಆದರೆ ಕಟ್ಟೆಮಾಡುವಿನಲ್ಲಿರುವ ಅರೆಭಾಷೆ ಒಕ್ಕಲಿಗರ ಮತ್ತು ಸಂಖ್ಯಾಬಲವಿಲ್ಲದ ಇತರ ಸಣ್ಣಪುಟ್ಟ ಸಮುದಾಯದ ಹಿಂದುಳಿದ ವರ್ಗಗಳ ನ್ಯಾಯಯುತ ಬೇಡಿಕೆಗಳ ಬೆನ್ನಿಗೆ ನಾವು ನಿಲ್ಲಲಿದ್ದೇವೆ.

* ನಮ್ಮ ಸಭೆ ಮತ್ತು ಮೆರವಣಿಗೆಗಳಲ್ಲಿ ಜನಾಂಗದ ಸ್ವಾತಂತ್ರö್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸುವ ಸಂದರ್ಭದಲ್ಲಿ ಕೊಡವ ಜನಾಂಗದ ಹಿರಿಯರಿಗೂ ಗೌರವ ಸಲ್ಲಿಸುತ್ತಿದ್ದೆವು. ಆದರೆ ಅವರು ಉದ್ದೇಶಪೂರ್ವಕವಾಗಿ ನಮ್ಮ ನಾಯಕರಿಗೆ ಗೌರವ ಸಲ್ಲಿಸದೇ ಇರುವುದನ್ನು ಗಮನಿಸಿದರೆ ಅವರ ಜಾತಿ ವೈಷಮ್ಯ ಎದ್ದು ಕಾಣುತ್ತಿದೆ.

* ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪನವರು ಕೊಡಗಿನ ಎಲ್ಲಾ ಜನಾಂಗದವರಿAದ ಆಯ್ಕೆಯಾಗಿದ್ದು ಕೇವಲ ಒಂದು ಜನಾಂಗದ ಪರವಾಗಿ ಪತ್ರಿಕಾ ಹೇಳಿಕೆ ನೀಡಿದಲ್ಲದೆ ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿ, ಮತ್ತೊಂದು ಜನಾಂಗದ ವಿರುದ್ಧದ ಮನವಿ ಪತ್ರಕ್ಕೆ ಸಾಕ್ಷಿಯಾಗಿದನ್ನು ಖಂಡಿಸುತ್ತೇವೆ. ಮತ್ತು ಬಿಜೆಪಿ ಪಕ್ಷವು ಅವರ ಮೇಲೆ ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ಪಕ್ಷದಿಂದ ನಮ್ಮ ಜನಾಂಗವು ಅಂತರ ಕಾಪಾಡಿಕೊಳ್ಳಲಿದೆ ಮತ್ತು ಕೊಡಗಿನಲ್ಲಿ ಗೌಡರಿಗೆ ಅವರ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ಕೊಡದ ಪಕ್ಷಗಳನ್ನು ದೂರವಿಡಲಾಗುವುದು.

* ಮೊನ್ನೆ ನಡೆದ ಪಾದಯಾತ್ರೆ ಸಂದರ್ಭ ಹಲವಾರು ಶಾಲೆಗಳು ಜಾತಿಯ ಬಣ್ಣ ಬಳಿದುಕೊಂಡು ರಜೆ ಘೋಷಣೆ ಮಾಡಿದ್ದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದರೂ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರಜ್ಞಾವಂತರೆಲ್ಲರೂ ಖಂಡಿಸಬೇಕಿದೆ. ಏನೂ ಅರಿಯದ ಮುಗ್ಧ ಮನಸ್ಸುಗಳಿಗೆ ಜಾತಿಯ ವಿಷ ಬೀಜ ಬಿತ್ತುವ ಹೀನ ಕಾರ್ಯ ಮಾಡಬಾರದಿತ್ತು.

* ನಾವು ನಮ್ಮ ವಿರುದ್ಧ ಅವಹೇಳನೆಯನ್ನು ಮಾಡಿದ ಸಿ.ಎನ್.ಸಿ ಸಂಘಟನೆ ಮತ್ತು ಕೆಲವು ದುಷ್ಕರ್ಮಿಗಳನ್ನು ಬಂಧಿಸುವ ಸಲುವಾಗಿ ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ಭಾಗವಹಿಸಿದ್ದರು. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಮತ್ತು ಕೊಡಗಿನಲ್ಲಿ ಅರೆಭಾಷೆ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಮಾರು ಐದು ಲಕ್ಷ ಜನರಿದ್ದಾರೆ. ಶಾಲಾ ಕಾಲೇಜುಗಳಿಂದ ಮಕ್ಕಳನ್ನು ಕರೆತರದೆ ಮಡಿಕೇರಿಯಲ್ಲಿ ಎರಡು ಲಕ್ಷ ಅರೆಭಾಷೆ ಮಾತನಾಡುವ ಒಕ್ಕಲಿಗರನ್ನು ಸೇರಿಸುವುದು ನಮಗೆ ದೊಡ್ಡ ಸಂಗತಿಯಲ್ಲ. ಆದರೆ ನಾವು ದೇಶದ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಗೆ ತಲೆಬಾಗುವವರು. ನಮ್ಮ ಜನಾಂಗವು ಪ್ರತ್ಯೇಕತೆಯನ್ನು ಪ್ರತಿಪಾದಿಸಿಲ್ಲ. ನಮ್ಮ ಜನಾಂಗವನ್ನು ನಿಂದನೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತ ಮತ್ತು ಸರಕಾರದ ಜವಾಬ್ದಾರಿ.

* ಈ ಹಿಂದಿನ ನಮ್ಮ ದೂರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿ ಸಿ.ಎನ್.ಸಿ ಮತ್ತು ಇತರರ ಮೇಲೆ ಕಠಿಣ ಕ್ರಮಕೈಗೊಂಡಿದ್ದಲ್ಲಿ ಇಷ್ಟರಲ್ಲೇ ಕೊಡಗಿನಲ್ಲಿ ಶಾಂತಿ ನೆಲೆಸಿರುತ್ತಿತ್ತು.

* ಈಗಲೂ ಸಹ ತಡ ಮಾಡದೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಜನಾಂಗವನ್ನು ನಿಂದಿಸುವ ವ್ಯಕ್ತಿಗಳು, ಯಾವುದೇ ಜನಾಂಗದಲ್ಲಿದ್ದರೂ ಅವರ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ತಾರತಮ್ಯ ಮಾಡದೇ, ಯಾವುದೇ ಒತ್ತಡಕ್ಕೆ ತಲೆ ಬಾಗದೇ ಕಠಿಣ ಕ್ರಮ ಜರುಗಿಸಿ ಕೊಡಗಿನಲ್ಲಿ ಎಲ್ಲಾ ಜನಾಂಗದವರು ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳಲು ವಾತಾವರಣ ಸೃಷ್ಟಿ ಮಾಡಬೇಕೆಂದು ಕೋರುತ್ತಿದ್ದೇವೆ.