ಗೋಣಿಕೊಪ್ಪಲು, ಫೆ. ೧೧: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮಿಣ ಉದ್ಯೋಗಖಾತ್ರಿ ಯೋಜನೆಯು (ನರೇಗಾ) ಅನುಷ್ಠಾನಗೊಳಿಸುವುದು ಕಷ್ಟಕರ ಎಂಬ ದೂರಿನ ನಡುವೆಯು ಈ ಯೋಜನೆಯ ಮೂಲಕ ಸಾಕಷ್ಟು ಮಾನವ ದಿನಗಳನ್ನು ಸೃಷ್ಟಿಸಿ ರಾಜ್ಯ ಪ್ರಶಸ್ತಿ ಪಡೆಯುವಲ್ಲಿ ಕೇರಳ-ಕರ್ನಾಟಕ ಗಡಿಭಾಗವಾಗಿರುವ ಕುಟ್ಟದ ಅನತಿ ದೂರದಲ್ಲಿರುವ ಕೆ. ಬಾಡಗ ಗ್ರಾಮ ಪಂಚಾಯಿತಿ ಯಶಸ್ವಿಯಾಗಿದೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ನರೇಗಾ ರಾಜ್ಯ ಪ್ರಶಸ್ತಿಯನ್ನು ಕೆ. ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಉಪಾಧ್ಯಕ್ಷೆ ಪಿ.ಎ. ರಾಧ, ಸದಸ್ಯರುಗಳಾದ ಸಿ.ಡಿ. ಬೋಪಣ್ಣ, ರೀಟಾ ಸೇರಿದಂತೆ ಪಿಡಿಓ ಕೆ.ಎಂ. ತಿಮ್ಮಯ್ಯ ಸ್ವೀಕರಿಸಿದರು. ಈ ವೇಳೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಯು ಈಗಾಗಲೇ ಸ್ವಚ್ಛತಾ ಕಾರ್ಯದ ಯಶಸ್ವಿಗಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ಕೆ. ಬಾಡಗ ಗ್ರಾಮ ಪಂಚಾಯಿತಿಯು ಇದೀಗ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿ ವರ್ಗಗಳ ಅವಿರತ ಶ್ರಮದಿಂದಾಗಿ ೨೦೨೪-೨೫ನೇ ಸಾಲಿನ ರಾಜ್ಯಮಟ್ಟದ (ನರೇಗಾ) ಪ್ರಶಸ್ತಿ ಪಡೆದುಕೊಂಡಿದೆ.

೩೫೦೦ಕ್ಕೂ ಅಧಿಕ ಜನಸಂಖ್ಯೆಯುಳ್ಳ ಈ ಪಂಚಾಯಿತಿಯಲ್ಲಿ ೨೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಾಸವಾಗಿದ್ದಾರೆ. ೨೨೮೮ ಹೆಕ್ಟೇರ್ ವಿಸ್ತೀರ್ಣವುಳ್ಳ ಕೆ. ಬಾಡಗ ಗ್ರಾಮ ಪಂಚಾಯಿತಿಯಲ್ಲಿ ನಾಣಚ್ಚಿ ಗದ್ದೆ ಹಾಡಿ, ಚಂದನಕೆರೆ, ಬಾಳೆಕೋವು, ತಿರುನಾಡ ಪೈಸಾರಿ, ಚೂರಿಕಾಡು, ಮುಚ್ಚನಕೊಲ್ಲಿ, ಬೊಳ್ಳೆರ ಗೇಟ್, ಪೂಕಂಡಿ, ತಾಯಿಭೂಮಿ ಪೈಸಾರಿ, ಕೋದಮೂಲೆ, ಹಾಡಿಗಳನ್ನು ಹೊಂದಿರುವ ಜನವಸತಿ ಪ್ರದೇಶಗಳಾಗಿವೆ.

ಈಗಾಗಲೇ ಕಳೆದ ಮೂರು ವರ್ಷಗಳಿಂದ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮಿಣ ಉದ್ಯೋಗಖಾತ್ರಿ ಯೋಜನೆಯ(ನರೇಗಾ)ಲ್ಲಿ ೧೦ ಸಾವಿರ ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ಈ ಭಾಗದ ೮೦೦ ಕುಟುಂಬಗಳಿಗೆ ಉದ್ಯೋಗವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದರ ಫಲವಾಗಿ ರಾಜ್ಯ ಪ್ರಶಸ್ತಿಯು ಲಭಿಸಿದೆ.

೯ ಸದಸ್ಯರಿರುವ ಆಡಳಿತ ಮಂಡಳಿಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಉಪಾಧ್ಯಕ್ಷರಾಗಿ ಪಿ.ಆರ್. ರಾಧ, ಸದಸ್ಯರುಗಳಾಗಿ ಜೇನುಕುರುಬರ ಆರ್. ಚಂದ್ರ, ಚೆಪ್ಪುಡೀರ ರೀಟಾ ವಿಜಯ್, ರಮೇಶ್, ಲಕ್ಷಿö್ಮ, ಪಿ.ಎನ್. ಕಾವೇರಿ, ಸಿ.ಡಿ. ಬೋಪಣ್ಣ ಹಾಗೂ ಸಿ. ಜಾನಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ೬ ಸದಸ್ಯರಿದ್ದು ೩ ಸದಸ್ಯರು ಸಾಮಾನ್ಯ ವರ್ಗದವರಾಗಿದ್ದಾರೆ. ವಾರ್ಷಿಕ ತೆರಿಗೆ ಆದಾಯದ ಗಳಿಕೆಯಲ್ಲಿ ಕಡಿಮೆಯಿದ್ದರೂ ತೆರಿಗೆ ಸಂಗ್ರಹ ಹಾಗೂ ವಸೂಲಾತಿಯಲ್ಲಿ ಶೇ. ೧೦೦ ಸಾಧನೆ ಮಾಡಿದೆ.

ಸಂಪನ್ಮೂಲ ಕ್ರೋಢೀಕರಣೆಗೆ ಉತ್ತಮ ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿಯು ಈಗಾಗಲೇ ಲಭಿಸಿದೆ. ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅತಿಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಎನ್‌ಆರ್‌ಇಜಿ ಯೋಜನೆ ಪ್ರಾರಂಭವಾದ ನಂತರ ಅತೀ ಹೆಚ್ಚು ಮಾನವ ದಿನ ಸೃಷ್ಟಿ ಮಾಡಿದ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಜೀವಿನಿ ಒಕ್ಕೂಟದಿಂದ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಮಾಡಲಾಗುತ್ತಿದೆ. ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ. -ಹೆಚ್.ಕೆ. ಜಗದೀಶ್