ಆವೆAರ‍್ಸ್ ರನ್ನರ್ ಆಪ್

ಗೋಣಿಕೊಪ್ಪಲು, ಫೆ. ೧೨ ರೋಚಕ ಮಡಿಕೇರಿಯ ಸ್ಪಾರ್ಟನ್ಸ್ ತಂಡವು ವೀರಾಜಪೇಟೆಯ ಆವೆಂರ‍್ಸ್ ತಂಡವನ್ನು ೪೭-೪೬ ಅಂಕಗಳಿAದ ಸೋಲಿಸಿ ಪ್ರತಿಷ್ಠಿತ ‘ಕೂರ್ಗ್ ಯುನೈಟೆಡ್’ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಪೊನ್ನಂಪೇಟೆಯ ಸಂತ ಅಂತೋಣಿ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಪ್ರತಿಷ್ಠಿತ ೮ ತಂಡಗಳು ಭಾಗವಹಿಸಿದ್ದವು. ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳು ಭಾಗವಹಿಸಿದ್ದರು.

ಪೊನ್ನಂಪೇಟೆಯ ಕೂರ್ಗ್ ಯುನೈಟೆಡ್ ತಂಡವು ಅತ್ಯುತ್ತಮ ಪ್ರದರ್ಶನ ತೋರಿದ ತಂಡವಾಗಿ ಪ್ರಶಸ್ತಿಯನ್ನು ಸ್ವೀಕರಿಸಿತು. ವೀರಾಜಪೇಟೆಯ ಪ್ರಗತಿ ಹೂರ‍್ಸ್, ಪೊನ್ನಂಪೇಟೆಯ ಬರ‍್ಸೆಕರ‍್ಸ್, ಗೋಣಿಕೊಪ್ಪಲುವಿನ ಬಿಬಿಸಿ, ಮಡಿಕೇರಿಯ ಎಲಿಟ್ ಹೂರ‍್ಸ್, ಮಡಿಕೇರಿಯ ನೆಟ್ ರೈಪರ್ಸ್ಸ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಪಿಯನ್ನು ವಿತರಿಸಲಾಯಿತು. ಪಂದ್ಯಾವಳಿಯನ್ನು ಕೂರ್ಗ್ ಯುನೈಟೆಡ್ ಬಾಸ್ಕೆಟ್‌ಬಾಲ್ ಕ್ಲಬ್‌ನ ಮುಖ್ಯಸ್ಥ ಸಿ.ಎಸ್. ಸೋಮಯ್ಯ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ ಕರ್ನಲ್ ಮುತ್ತಣ್ಣ ಮಾತನಾಡಿ, ಬಾಸ್ಕೆಟ್‌ಬಾಲ್ ಪಂದ್ಯಾಟದಿAದ ದೈಹಿಕ ಸಾಮರ್ಥ್ಯ ಉತ್ತಮವಾಗುವುದಲ್ಲದೆ ತಮ್ಮ ಆರೋಗ್ಯವು ಸದಾ ಲವಲವಿಕೆಯಿಂದ ಕೂಡಿರುತ್ತದೆ. ಪ್ರತಿನಿತ್ಯ ಆಟವನ್ನು ಅಭ್ಯಾಸ ಮಾಡುವುದು ಉತ್ತಮ. ಬಾಸ್ಕೆಟ್‌ಬಾಲ್ ಪಂದ್ಯಾಟಕ್ಕೆ ಹೆಚ್ಚಿನ ಉತ್ತೇಜನ ಸಿಗುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂರ್ಗ್ ಯುನೈಟೆಡ್ ಬಾಸ್ಕೆಟ್‌ಬಾಲ್ ಕ್ಲಬ್‌ನ ಮುಖ್ಯಸ್ಥ ಸಿ.ಎಸ್. ಸೋಮಯ್ಯ ಮಾತನಾಡಿ, ಪ್ರತಿ ವರ್ಷವೂ ಜಿಲ್ಲಾಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತ ಬಂದಿದ್ದೇವೆ, ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು.

ತಾಲೂಕು ಕೇಂದ್ರಗಳಲ್ಲಿ ಹೊನಲು ಬೆಳಕಿನ ಮೈದಾನದ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಕ್ರೀಡಾಪಟುಗಳಿಗೆ ಸಿಗುವಂತಾಗಬೇಕು ಇದರಿಂದ ಶಾಲಾ ಮಟ್ಟದಲ್ಲಿಯೇ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಅವಕಾಶವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಪಟುಗಳಾದ ಮಾಳೇಟಿರ ರಶ್ಮಿ, ರಾಜ ರೈ, ಸನ್ನು, ನಾಗೇಂದ್ರ ರೈ ಸೇರಿದಂತೆ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರಿನ ಬೇಸ್‌ಲೈನ್ ಅಕಾಡೆಮಿಯ ಹರ್ಷ ಮತ್ತು ತಂಡ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಮಧ್ಯರಾತ್ರಿ ೧೨.೩೦ರವರೆಗೂ ಪಂದ್ಯಾವಳಿ ನಡೆದವು. ಸುತ್ತಮುತ್ತಲಿನ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾಟವನ್ನು ವೀಕ್ಷಿಸಿದರು.