ವೀರಾಜಪೇಟೆ, ಫೆ. ೧೧: ವೀರಾಜಪೇಟೆ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕೊಡವರಿಗೆ ನೀಡಬೇಕು. ಆ ಮೂಲಕ ಸಮರ್ಥ ನಾಯಕತ್ವದಲ್ಲಿ ಜನಸೇವೆಗೆ ಅವಕಾಶ ನೀಡಿದಂತಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲವು ಸಾಧಿಸುವಂತಾಗಬೇಕೆAದು ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಪ್ರಮುಖ ಮೊಳ್ಳೇರ ಸದಾ ಅಪ್ಪಚ್ಚು ಹೇಳಿದರು.
ವೀರಾಜಪೇಟೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಕೊಡವ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇಂತಹವರಿಗೆ ಸ್ಥಾನ ನೀಡಿ ಎಂದು ಆಗ್ರಹಿಸುವುದಿಲ್ಲ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಾವಿಲ್ಲ. ಆದರೆ ವೀರಾಜಪೇಟೆ ತಾಲೂಕಿನಲ್ಲಿ ಪಕ್ಷವನ್ನು ಬೆಳೆಸುವ, ಮುನ್ನಡೆಸುವ ಮಹತ್ವದ ಜವಾಬ್ದಾರಿ ತುಂಬಾ ಇದೆ. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮಕ್ಕೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟಿಸಬೇಕಾಗಿದೆ. ಯುವ ಕಾಂಗ್ರೆಸ್ ಆಯ್ಕೆ ಬಗ್ಗೆ ಪಕ್ಷದಲ್ಲಿ ಬೇಸರವಿದೆ. ಸ್ಥಾನ ಅಲಂಕರಿಸಿದ್ದೇನೆ ಎಂದರೆ ಸಾಲದು ಜನ ವಿಶ್ವಾಸದೊಂದಿಗೆ ಸರ್ಮಥವಾಗಿ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮ ಶಾಸಕರನ್ನು ಮತ್ತೆ ಅಧಿಕಾರಕ್ಕೆ ತರಲು ಈಗಿನಿಂದಲೇ ಕೆಲಸ ನಿಭಾಯಿಸಬೇಕು. ಪಟ್ಟಣಕ್ಕಿಂತ ಗ್ರಾಮದಲ್ಲಿ ಬಿಜೆಪಿಯ ಒಲವು ಹೆಚ್ಚಿದೆ. ಮೋದಿ ಮಾಯೆ ಎಲ್ಲಾರನ್ನು ಕಾಡುತ್ತಿದೆ. ಕಾಂಗ್ರೆಸ್ ಪಕ್ಷ ಸಹ ಸಮರ್ಥವಾಗಿದ್ದು ದೇಶವನ್ನು ಉತ್ತಮವಾಗಿ ಮುನ್ನಡೆಸಿದೆ. ಪಕ್ಷಕ್ಕೆ ಸಮರ್ಥ ನಾಯಕತ್ವದ ಅಗತ್ಯವನ್ನು ಪ್ರತಿಪಾದಿಸಲು ಕೊಡವರಿಗೆ ವೀರಾಜಪೇಟೆ , ಪೊನ್ನಂಪೇಟೆ ತಾಲೂಕಿನಲ್ಲಿ ಪ್ರಾತಿನಿಧ್ಯ ನೀಡಬೇಕು. ಈ ಕುರಿತು ಮನವಿಯನ್ನು ವರಿಷ್ಠರಿಗೆ ಸಲ್ಲಿಸುತ್ತೇವೆ ಎಂದು ಸದಾ ಅಪ್ಪಚ್ಚು ಹೇಳಿದರು.
ಹಿರಿಯ ವಕೀಲ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಂ.ಎಸ್. ಪೂವಯ್ಯ ಮಾತನಾಡಿ, ಕೊಡವರಿಗೆ ಸ್ಥಾನ ನೀಡಿ ಎಂದು ಕೇಳುವುದರಲ್ಲಿ ತಪ್ಪೇನು ಇಲ್ಲ. ಕೊಡವರು ಸಂಕೋಚದಿAದ ಹಿಂದೆ ಸರಿದು ನಿಲ್ಲುತ್ತಾರೆ. ನಾವು ಸಹ ಪಕ್ಷಕ್ಕಾಗಿ ಎಲ್ಲಾ ರೀತಿಯಲ್ಲಿ ದುಡಿದು ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ. ಹಿಂದಿಗಿAತ ಜವಾಬ್ದಾರಿ ನಿಭಾಯಿಸುವ ದೊಡ್ಡ ಹೊಣೆ ನಮಗಿದೆ. ಆದ್ದರಿಂದ ಸರ್ಮಥವಾಗಿ ಪಕ್ಷ ಮುನ್ನಡೆಸಲು ಕೊಡವರಿಗೆ ಅವಕಾಶ ನೀಡಬೇಕು. ಶಾಸಕ ಪೊನ್ನಣ್ಣ ಸಮರ್ಥ ನಾಯಕ ಇಂತಹ ವಿಚಾರದಲ್ಲಿ ಅವರು ಉತ್ತಮ ನಿರ್ಧಾರ ತಳೆಯಬಲ್ಲರು ಎಂಬ ವಿಶ್ವಾಸ ನಮಗಿದೆ. ಮುಂದೆ ಅವರು ಅಧಿಕಾರ ಮರಳಿ ಪಡೆಯಬೇಕಾದರೆ ಪಕ್ಷವನ್ನು ಇಂದಿನಿAದಲೆ ಸಮರ್ಥ ನಾಂiÀiಕತ್ವದೊAದಿಗೆ ಮುನ್ನಡೆಸಿ ಕೆಳಮಟ್ಟದಲ್ಲಿ ಪಕ್ಷ ಸಂಘಟನೆಗೊAಡು ಬಲಗೊಳ್ಳಬೇಕಿದೆ. ಕೊಡವರಿಗೂ ಅವರ ಸಂಸ್ಕೃತಿ ಆಚಾರ ವಿಚಾರ ನೆಲೆಗಟ್ಟನ್ನು ಉಳಿಸಿಕೊಂಡು ಹೋಗಲು ಒಂದು ರಾಜಕೀಯ ನೆಲೆಗಟ್ಟಿನ ಅಗತ್ಯವಿದೆ. ಕಾಂಗ್ರೆಸ್ ಪಕ್ಷದವರು ಸಹಕಾರ ನೀಡಿ ಕೊಡವರನ್ನು ಬ್ಲಾಕ್ ಕಾಂಗ್ರೆಸ್ ಸ್ಥಾನಕ್ಕೆ ತರಬೇಕೆಂದು ಆಗ್ರಹಿಸಿದರು.
ಹಿರಿಯರಾದ ಮಾಳೇಟಿರ ಕಾಶಿ ಮಾತನಾಡಿ, ಗ್ರಾಮಾಂತರ ಮಟ್ಟದಿಂದಲೇ ಅಗತ್ಯವಾಗಿ ಬಲವರ್ಧನೆ ಮಾಡಬೇಕಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲು ಕೊಡವರಿಗೆ ದಕ್ಷಿಣದ ಎರಡು ಬ್ಲಾಕ್ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರನ್ನು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂಬಾAಡ ಕರುಣ್ ಕಾಳಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೊಳುವಂಡ ಮಂದಪ್ಪ, ಮಾಳೇಟಿರ ಕಾಳಯ್ಯ, ಕಾಳಮಂಡ ಮೋಹನ್, ಕುಟ್ಟಂಡ ರಾಬಿನ್, ಉಳ್ಳಿಯಡ ಜೀವನ್, ಮಾಚಿಮಂಡ ಪುಟ್ಟು, ಐಚೇಟ್ಟಿರ ರಂಜಿ, ಮುಕ್ಕಾಟಿರ ವಿನಿತಾ ಕಾವೇರಮ್ಮ ಮುಂತಾದವರು ಉಪಸ್ಥಿತರಿದ್ದರು.