ಗೋಣಿಕೊಪ್ಪಲು, ಫೆ. ೧೨: ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟ ಘಟನೆ ಬಾಳೆಲೆಯಲ್ಲಿ ನಡೆದಿದೆ. ಬಾಳೆಲೆ ಗ್ರಾಮದ ಅಡ್ಡೆಂಗಡ ಸಜನ್ (೫೨) ಮೃತ ದುರ್ದೈವಿ.

ಬುಧವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಗೋಣಿಕೊಪ್ಪ ದಿಂದ ತಮ್ಮ ಮಾರುತಿ ೮೦೦ ಕಾರಿನಲ್ಲಿ ಸಜನ್ ಬಾಳೆಲೆಯ ಮನೆಯ ಕಡೆಗೆ ತೆರಳುತ್ತಿದ್ದರು. ಕಾರು ಬಾಳೆಲೆ ಸಮೀಪದ ಕೈ ನಾಟಿ ಜಂಕ್ಷನ್ ಬಳಿ

ಈಚರ್ ಗೂಡ್ಸ್ ಲಾರಿಗೆ ಕಾರು ಡಿಕ್ಕಿಯಾಗಿದೆ.

ಇದರಿಂದಾಗಿ ಕಾರು ಸಂಪೂರ್ಣ ಜಖಂಗೊAಡು ಕಾರಿನಲ್ಲಿದ್ದ ಸಜನ್‌ಗೆ ಗಂಭೀರ ಸ್ವರೂಪದ ಗಾಯ ವಾಗಿದೆ. ಕೂಡಲೇ ಬಾಳೆಲೆ ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ಸಹಾಯ ದಿಂದ ಚಿಕಿತ್ಸೆಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ಕರೆತರಲಾಯಿತು.(ಮೊದಲ ಪುಟದಿಂದ) ಆಸ್ಪತ್ರೆಗೆ ಕರೆ ತರುತ್ತಿದ್ದಂತೆಯೇ ತೀವ್ರ ರಕ್ತ ಸ್ರಾವದಿಂದ ಸಜನ್ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿದ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಗೋಣಿಕೊಪ್ಪ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪಾರ ಸ್ನೇಹಿತ ಬಳಗ ಹೊಂದಿದ್ದ ಸಜನ್ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ವೃತ್ತಿಯಲ್ಲಿ ರೈತರಾಗಿರುವ ಸಜನ್ ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.