ಸುಂಟಿಕೊಪ್ಪ, ಫೆ. ೧೨: ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡು ಹಂದಿ ದಾಳಿ ಮಾಡಿ ಗಾಯಗೊಳಿಸಿದೆ.
ತಾ.೧೨ ರಂದು ಬೆಳಿಗ್ಗೆ ೭.೩೦ ರ ಸಂದರ್ಭ ಸುಂಟಿಕೊಪ್ಪ ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕರು ಕಾಫಿ ಕೊಯ್ಯಲು ಕೆಲಸದಲ್ಲಿ ನಿರಂತರಾಗುವ ಸಂದರ್ಭ ಏಕಾಏಕಿ ಕಾಡು ಹಂದಿ ಸರಸ್ವತಿ ಎಂಬವರ ಮೇಲೆ ಎರಗಿದೆ. ಜೊತೆಗಿದ್ದ ಕಾರ್ಮಿಕರು ರಕ್ಷಣೆಗೆ ಧಾವಿಸಿ ಕಾಡು ಹಂದಿಯಿAದ ಸರಸ್ವತಿ ಅವರನ್ನು ರಕ್ಷಿಸಿದ್ದಾರೆ. ವಿಷಯ ಅರಿತು ಧಾವಿಸಿ ಬಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ ಹಾಗೂ ಕೆ.ಎಂ. ಆಲಿಕುಟ್ಟಿ ಗಾಯಾಳು ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆ ಹಾಗೂ ಹುಲಿ ದಾಳಿಗಳ ಬಗ್ಗೆ ಆಗಿಂದಾಗೆ ಘಟನೆಗಳು ನಡೆಯುತ್ತಿದ್ದು ಇದೀಗ ಆ ಸಾಲಿಗೆ ಕಾಡು ಹಂದಿ ಸೇರ್ಪಡೆಗೊಂಡಿರುವುದು ಕಾರ್ಮಿಕರಲ್ಲಿ ತೋಟದ ಮಾಲೀಕರುಗಳಿಗೂ ಭಯವನ್ನು ಉಂಟುಮಾಡಿದೆ.