ವೀರಾಜಪೇಟೆ, ಫೆ. ೧೧: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಉತ್ಸವ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವ (ಕ್ಯಾಂಡಲ್ ಹಬ್ಬ)ವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಕೊಡಗಿನ ಮೊದಲ ಕ್ರೆöÊಸ್ತ ದೇವಾಲಯವಾದ, ೨೩೩ ವರ್ಷಗಳ ಇತಿಹಾಸ ಹೊಂದಿರುವ ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್ನಲ್ಲಿ ಹಬ್ಬದ ಪ್ರಯುಕ್ತ ಸಂಭ್ರಮ ಮುಗಿಲುಮುಟ್ಟಿತ್ತು.

ವಾರ್ಷಿಕ ಮಹೋತ್ಸವದ ಅಂಗವಾಗಿ ತಾ.೮ ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊAಡು ದಿವ್ಯ ಬಲಿಪೂಜೆ, ಜಪಸರ ನಡೆದು ತಾ.೧೧ ರಂದು ಸಂಜೆ ಸಂತ ಅನ್ನಮ್ಮ ದೇವಾಲಯದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು.

ಭಕ್ತಾದಿಗಳು ಸಂತ ಅನ್ನಮ್ಮ ದೇವಾಲಯದಿಂದ ಮೇಣದ ಬತ್ತಿ ಹಿಡಿದು ಲೂರ್ದ್ ಮಾತೆ ಹಾಗೂ ಸಂತ ಅನ್ನಮ್ಮ ಅವರ ವಿದ್ಯುತ್ ಮತ್ತು ಹೂವಿನ ಅಲಂಕೃತ ಮಂಟಪ, ವಾದ್ಯಗೋಷ್ಠಿಯೊಂದಿಗೆ ದೇವರ ಕೀರ್ತನೆಗಳನ್ನು ಜಪಿಸುತ್ತ ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮುಖ್ಯ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಸಂತ ಅನ್ನಮ್ಮ ದೇವಾಲಯದವರೆಗೆ ಮೆರವಣಿಗೆ ನಡೆಸಿದರು. ಜಪಸರದ ಪಠಣ ಮಾಡಿ ಪ್ರಾರ್ಥಿಸಿದರು.

ಮೆರವಣಿಗೆ ಮತ್ತು ಗಾಯನ ಬಲಿಪೂಜೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ಜೇಮ್ಸ್ ಡೊಮಿನಿಕ್, ಧರ್ಮಗುರುಗಳು ಮತ್ತು ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈಮುತ್ತು ಸೇರಿದಂತೆ ಕೊಡಗಿನ ವಿವಿಧೆಡೆಯಿಂದ ಧರ್ಮಗುರುಗಳು ಆಗಮಿಸಿ ಬಲಿಪೂಜೆ ನಡೆಸಿದರು.

ಮೆರವಣಿಗೆಯ ನಂತರ ಪರಮಪ್ರಸಾದ ಆಶೀರ್ವಾದ ನಡೆಯಿತು. ನೆರೆದ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.