ಗೋಣಿಕೊಪ್ಪಲು, ಫೆ. ೧೧: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದು ವರಿದಿದ್ದು, ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ರೈತÀ ಕೋಟ್ರಮಾಡ ವಿಜು ಸೋಮಯ್ಯ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದುಹಾಕಿದೆ.
ವಿಜು ಸೋಮಯ್ಯ ಹೈನು ಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ೧೬ ಹಸುಗಳನ್ನು ಸಾಕುತ್ತಿದ್ದಾರೆ.
ಎಂದಿನAತೆ ಹಸುವನ್ನು ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ. ಸುದ್ದಿ ತಿಳಿದ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿAಗ್ ಕೈಗೊಂಡ ಇಲಾಖೆಯ ತಂಡಕ್ಕೆ ಹುಲಿಯ ಹೆಜ್ಜೆ ಗುರುತು ಪತ್ತೆ ಆಗಿದೆ. ಮಾಹಿತಿ ತಿಳಿದ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಟಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಪ್ರಮುಖರಾದ ಅಪ್ಪಚಂಗಡ ಮೋಟಯ್ಯ, ಮಚ್ಚಮಾಡ ಸೋಮಣ್ಣ ಮತ್ತಿತರರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸರ್ಕಾರದ ವತಿಯಿಂದ ನೀಡುವ ಪರಿಹಾರದಲ್ಲಿ ಹೆಚ್ಚಳ ಮಾಡುವಂತೆ ಹಸುವಿನ ಮಾಲೀಕರು ಅಧಿಕಾರಿಗಳಿಗೆ ಹಾಗೂ ಸಂಕೇತ್ ಪೂವಯ್ಯ ನವರ ಬಳಿ ಮನವಿ ಸಲ್ಲಿಸಿದರು.
ಹುಲಿಯ ಸೆರೆಗೆ ಕಾರ್ಯಾ ಚರಣೆ ಮುಂದುವರಿಸುವAತೆ ಸ್ಥಳದ ಲ್ಲಿದ್ದ ಅಧಿಕಾರಿಗಳಿಗೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನಿರ್ದೇ ಶನ ನೀಡಿದರು. ಪರಿಹಾರ ಹೆಚ್ಚಳದ ಬಗ್ಗೆ ಶಾಸಕ ಎ.ಎಸ್. ಪೊನ್ನಣ್ಣನವರ ಗಮನ ಸೆಳೆಯುವ ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾ ಗುತ್ತದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹಸುವಿನ ಮಾಲೀಕರಿಗೆ ಭರವಸೆ ನೀಡಿದರು. ಭೇಟಿಯ ವೇಳೆ ಗ್ರಾಮಸ್ಥರು ಹಾಜರಿದ್ದರು. ಹುಲಿಯ ಸಮಸ್ಯೆ ಬಗ್ಗೆ ವಿವರ ಒದಗಿಸಿದರು.