ಮಡಿಕೇರಿ, ಫೆ. ೧೩: ತರಗತಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಗುರುವಾರ ಮಡಿಕೇರಿ ಹೊರವಲಯದ ಗಾಳಿಬೀಡು ಸಮೀಪದ ಕೂಟುಹೊಳೆಯಲ್ಲಿ ಪತ್ತೆಯಾಗಿದೆ.
ಗಾಳಿಬೀಡು ಗ್ರಾಮದ ಜವಾಹರ್ ನವೋದಯ ವಿದ್ಯಾಸಂಸ್ಥೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವ ಹಿಸುತ್ತಿರುವ ಎಂ. ಎ. ಆನಂದ್ ಅವರ ಪುತ್ರ ಅದೇ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂ.ಎ. ಅಮಿತ್ (೧೭) ಮೃತ ವಿದ್ಯಾರ್ಥಿ.
ಅಮಿತ್ ಅವರ ಕುಟುಂಬ ಶಾಲೆಯ ವಸತಿ ಗೃಹದಲ್ಲಿ ವಾಸವಾಗಿದ್ದು, ತಾ. ೧೧ ರಂದು ಎಂದಿನAತೆ ಬೆಳಿಗ್ಗೆ ೭ ಗಂಟೆಗೆ ತರಗತಿಗೆಂದು ಅಮಿತ್ ತೆರಳಿದ್ದು, ಮಧ್ಯಾಹ್ನ ೧೨.೧೫ರ ಸುಮಾರಿಗೆ ಶಾಲೆಯ ಭದ್ರತಾ ಸಿಬ್ಬಂದಿ ಅಮಿತ್ ತಂದೆಗೆ ಕರೆ ಮಾಡಿ ‘ನಿಮ್ಮ ಮಗ ಶಾಲೆಯಿಂದ ಹೊರ ಹೋಗಿರುವುದಾಗಿ ತಿಳಿಸಿದ್ದಾರೆ. ತಕ್ಷಣ ತೆರಳಿ ನೋಡಿದಾಗ ಅಮಿತ್ ಅಲ್ಲಿರಲಿಲ್ಲ. ತರಗತಿಗೆ ತೆರಳಿ ವಿಚಾರಿಸಿದಾಗ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಶಿಕ್ಷಕರೊಬ್ಬರು ಇಂಗ್ಲೀಷ್ ನೋಟ್ಸ್ ತರುವಂತೆ ತಿಳಿಸಿದ ವೇಳೆ ಮನೆಗೆ ಹೋಗಿ ಬರುವುದಾಗಿ ಹೇಳಿ ಅಮಿತ್ ತೆರಳಿದ್ದಾನೆ’ ಎಂದು ಮಾಹಿತಿ ನೀಡಿದ್ದಾರೆ. ಎಲ್ಲೆಡೆ ಹುಡುಕಿ ಕುಟುಂಬಸ್ಥರನ್ನೂ ವಿಚಾರಿಸಿದ ಸಂದರ್ಭವೂ ಆತನ ಸುಳಿವು ಲಭ್ಯವಾಗದ ಹಿನ್ನೆಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣವೂ ದಾಖಲಾಗಿತ್ತು.
ತಾ. ೧೧ರಿಂದಲೇ ಮಡಿಕೇರಿ ಗ್ರಾಮಾಂತರ ಪೊಲೀಸರು ಅಮಿತ್ ಸುಳಿವು ಪತ್ತೆಹಚ್ಚಲು ಮುಂದಾಗಿದ್ದರು. ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಪಕ್ಕದಲ್ಲಿಯೇ ಕೂಟುಹೊಳೆ ಇರುವ ಕಾರಣ ಗ್ರಾಮಾಂತರ ಪೊಲೀಸರು, ಪೊಲೀಸ್ ಈಜುಗಾರರ ತಂಡ ಹಾಗೂ ಅಗ್ನಿಶಾಮಕ ದಳ ಹೊಳೆಯಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ. ತಾ. ೧೩ ರಂದು ಕೆಸರಿನ ನಡುವೆ ಮೃತದೇಹ ಪತ್ತೆಯಾಗಿದ್ದು, ಹೊರತೆಗೆದು ಕಾನೂನಾತ್ಮಕ ಪ್ರಕ್ರಿಯೆ ನಡೆಸಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.