ಕೂಡಿಗೆ, ಫೆ. ೧೩: ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದೆ.

ಒಟ್ಟು ೧೦ ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಸೋಮವಾರಪೇಟೆ ವಲಯ ಮತ್ತು ಕುಶಾಲನಗರ ವಲಯಗಳಲ್ಲಿ ಚುನಾವಣೆಗೆ ಒಟ್ಟು ೨೦ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರಪೇಟೆ ಮತ್ತು ಕುಶಾಲನಗರ ವಲಯದಿಂದ ತಲಾ ೫ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಚುನಾವಣೆಯಲ್ಲಿ ಒಟ್ಟು ೧೭೭ ಮತದಾರರಿದ್ದು, ಅದರಲ್ಲಿ ೧೭೪ ಮತಗಳು ಚಲಾವಣೆಗೊಂಡವು. ಎರಡು ಮತಗಳು ತಿರಸ್ಕೃತಗೊಂಡವು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸಂಘದ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊAಡಿತು. ಸೋಮವಾರಪೇಟೆ ವಲಯದಿಂದ ಎಸ್.ಆರ್. ಅರುಣ್ ರಾವ್, ಉದಯಕುಮಾರ್, ಗಂಗಾಧರ್, ಶ್ಯಾಮ್, ದೇವಿರಮ್ಮ, ಕುಶಾಲನಗರ ವಲಯ ವಿಭಾಗದಿಂದ ಕಾಳಯ್ಯ, ಬಿ.ಎಸ್. ಚಂದ್ರು, ಕಮಲ, ಜಿ.ಕೆ. ರಾಜು, ಕಾವೇರಿ ಗೆಲುವು ಸಾಧಿಸಿದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘದ ಅಧಿಕಾರಿ ಜಿ. ಹಿತ್ರೇಂದ್ರ ಕಾರ್ಯನಿರ್ವಹಿಸಿದರು.

ವಿಜಯೋತ್ಸವ: ಸಹಕಾರ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾದ ಸಂದರ್ಭ ವಿಜೇತ ತಂಡದವರು ಪಟಾಕಿ ಸಿಡಿಸಿ ವಿಜಯೋತ್ಸ ಆಚರಣೆ ನಡೆಸಿದರು.

ಈ ಸಂದರ್ಭ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಶಿವಕುಮಾರ್, ಕೂಡಿಗೆ ಸಹಕಾರ ಸಂಘದ ನಿರ್ದೇಶಕ ಕೆ. ಪಿ. ರಾಜು ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ರಾವ್, ಗ್ರಾಮದ ಪ್ರಮುಖರಾದ ಕೆ.ಸಿ. ರಾಜು. ಮದಲಾಪುರ ನಾಗೇಶ್, ರಂಗ, ಸಂತೋಷ್, ನಾಗರಾಜು, ಮಲ್ಲೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.