ಮಡಿಕೇರಿ, ಫೆ. ೧೩: ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನದಲ್ಲಿ ಉಂಟಾಗಿದ್ದ ವಸ್ತçಸಂಹಿತೆ ವಿಚಾರದ ವಿವಾದದ ಬಗ್ಗೆ ಇದೀಗ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಸಾಂಪ್ರದಾಯಿಕ ಉಡುಗೆ ಧರಿಸುವ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಕೆಲವು ಪ್ರಮುಖರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂತಿವೆ.

ದೇವಾಲಯ ಸಮಿತಿ ಆತ್ಮಾವಲೋಕನ ಮಾಡಿಕೊಳ್ಳಲಿ : ಪರದಂಡ ಸುಬ್ರಮಣಿ

ನ್ಯಾಯಾಲಯದ ಈಗಿನ ತೀರ್ಪನ್ನು ಉಲ್ಲೇಖಿಸಿ ಯಾರೂ ಪ್ರತೀಕಾರದ ರೀತಿಯಲ್ಲಿ ಪ್ರತಿಕ್ರಿಯಿಸುವದು ಬೇಡ. ತಾಳ್ಮೆ, ಗಾಂಭೀರ್ಯತೆ ಇರಲಿ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಹೇಳಿದ್ದಾರೆ.

ದೇವಾಲಯ ಸಮಿತಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪುರಾತನ ಪರಂಪರೆಗೆ ಧಕ್ಕೆ ತಂದ ನೋವು ಎಲ್ಲರಲ್ಲೂ ಇದೆ. ಆದರೆ, ಈ ನೆಲದ ಕಾನೂನಿಗೆ ನ್ಯಾಯಾಲಯದ ಮೂಲಕ ಗೌರವ, ಬೆಲೆ ದೊರೆತಂತಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಇಬ್ಬರು ಯುವಕರಾದ ಸಂಜು ಹಾಗೂ ಅಮಿತ್ ಅವರನ್ನು ಅಭಿನಂದಿಸುವುದಾಗಿ ಸುಬ್ರಮಣಿ ನುಡಿದರು.

ನ್ಯಾಯಾಲಯದಲ್ಲಿ ವಾದ ಮಾಡುತ್ತೇವೆ - ಜನಾರ್ಧನ

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದ ಬೈಲಾದಲ್ಲಿರುವ ವಸ್ತç ಸಂಹಿತೆ ವಿಚಾರಕ್ಕೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಸಂಬAಧ ತಾ. ೨೭ ರಂದು ವಿಚಾರಣೆ ನಡೆಯಲಿದ್ದು, ದೇವಾಲಯ ಸಮಿತಿ ಮೂಲಕ ನಾವೂ ಕೂಡ ನ್ಯಾಯಾಲಯದಲ್ಲಿ ವಾದ ಮಾಡಲೇಬೇಕಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಹೇಳಿದ್ದಾರೆ.

ಈ ಬಗ್ಗೆ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಇದೀಗ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದು, ಐದು ಮಂದಿಗಿAತ ಹೆಚ್ಚಿಗೆ ಮಂದಿ ದೇವಾಲಯಕ್ಕೆ ಹೋಗುವಂತಿಲ್ಲ. ಕಾನೂನಿಗೆ ವಿರುದ್ಧವಾಗಿ ಯಾರೂ ಕೂಡ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದರು.

ಗೌಡ ಸಮಾಜಗಳ ಒಕ್ಕೂಟದ ನಿಲುವು ಸ್ಪಷ್ಟ : ಸೂರ್ತಲೆ ಸೋಮಣ್ಣ

ಕಟ್ಟೆಮಾಡು ದೇವಸ್ಥಾನದಲ್ಲಿನ ವಿವಾದಕ್ಕೆ ಸಂಬAಧಿಸಿದAತೆ ಕೊಡಗು ಗೌಡ ಸಮಾಜ ಒಕ್ಕೂಟದ ನಿಲವು ಸ್ಪಷ್ಟವಾಗಿದೆ. ಇದು ಅಲ್ಲಿನ ದೇವಸ್ಥಾನ ಸಮಿತಿ, ಊರವರು ಹಾಗೂ ಶ್ರಮಿಕರಿಗೆ ಸೇರಿದ ವಿಚಾರವಾಗಿದೆ. ಯಾರಿಗೆ ಅಥವಾ ಯಾವ ಸಮುದಾಯಕ್ಕೆ ಅಸಮಾಧಾನವಿದೆ ಅವರು ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ಆದರೆ ಸಿಎನ್‌ಸಿ ಸಂಘಟನೆ ಹಾಗೂ ಗೌಡ ಸಮುದಾಯದ ಬಗ್ಗೆ ಜಾತಿ ನಿಂದನೆ, ಅವಹೇಳನದ ಕುರಿತಾಗಿ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಈ ನಿಲುವು ಹಾಗೆಯೇ ಇದೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸ್ಪಷ್ಟಪಡಿಸಲಾಗಿದೆ. ಕಟ್ಟೆಮಾಡು ವಿಚಾರ ಸ್ಥಳೀಯವಾಗಿದ್ದು, ಅಲ್ಲಿನವರೇ ಸೂಕ್ತ ತೀರ್ಮಾನದ ಮೂಲಕ ಬಗೆಹರಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅನ್ಯೋನ್ಯತೆಯ ಪರಿಪಾಠ ಮುಂದುವರಿಯಲಿ : ಸುಭಾಷ್ ನಾಣಯ್ಯ

ಕೊಡಗಿನಲ್ಲಿ ಈ ಹಿಂದಿನಿAದಲೂ ಮೂಲನಿವಾಸಿಗಳು, ಇತರರು ಅನ್ಯೋನ್ಯತೆಯಿಂದ ಬದುಕುತ್ತಿದ್ದು, ಈ ಪರಿಪಾಠ ಮುಂದುವರಿಯಬೇಕಿದೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಹೇಳಿದ್ದಾರೆ.

ಕಟ್ಟೆಮಾಡು ಪ್ರಕರಣದಲ್ಲಿ ಇದೀಗ ನ್ಯಾಯಾಲಯ ತಡೆಯಾಜ್ಞೆಯೊಂದಿಗೆ ಮಧ್ಯಂತರ ಆದೇಶ ನೀಡಿದೆ. ಮುಂದೆ ಪ್ರಸ್ತುತ ಉದ್ಭವಿಸಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ಎಲ್ಲೋ ಒಂದು ಕಡೆ ಅಚಾತುರ್ಯ ನಡೆದಿರಬಹದು. ಧಾರ್ಮಿಕ ಕೇಂದ್ರಗಳು ಇರುವುದು ನಾಡಿನ ಸುಭಿಕ್ಷೆಗಾಗಿ ಎಂಬದನ್ನು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯ ಬಹುತೇಕ ಧಾರ್ಮಿಕ ಕೇಂದ್ರಗಳಲ್ಲಿ ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕ ಉಡುಗೆ ಧರಿಸುವ ಪರಿಪಾಠ ಇದೆ. ಸಮಾನ ಮನಸ್ಕರಾಗಿ ಭಿನ್ನಾಭಿಪ್ರಾಯ ತಿಳಿಗೊಳ್ಳಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನ್ಯಾಯದ ಬಗ್ಗೆ ನಂಬಿಕೆ : ಸಂಜು - ಅಮಿತ್

ಕಟ್ಟೆಮಾಡು ದೇಗುಲದಲ್ಲಿ ಕೊಡವ ಸಾಂಪ್ರದಾಯಿಕ ಧಿರಿಸಿಗೆ ಅಡ್ಡಿಮಾಡಿದ್ದು, ಜನಾಂಗ ಹಾಗೂ ಭಾಷಿಕ ಜನಾಂಗದ ಎಲ್ಲರ ಮನದಾಳದಲ್ಲೂ ತೀವ್ರ ನೋವುಂಟು ಮಾಡಿದೆ. ಇದು ಭಾವನಾತ್ಮಕ ವಿಚಾರವೂ ಆಗಿತ್ತು. ಎಲ್ಲರ ಮನಸ್ಸಿನ ನೋವಿನಂತೆ ನಾವುಗಳು ಕೇವಲ ನಾಮಕಾವಸ್ತರಾಗಿ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಮುಂದೆ ಸಂಪೂರ್ಣ ನ್ಯಾಯ ಸಿಗುವ ಭರವಸೆ ಇರುವುದಾಗಿ ಅರ್ಜಿದಾರರಾದ ಚೊಟ್ಟೆಯಂಡ ಸಂಜು ಹಾಗೂ ಪಾಲೇಂಗಡ ಅಮಿತ್ ಭೀಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಆರಂಭದ ದಿನದಿಂದಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ೧೧೧ ಪುಟಗಳ ಪಿಟಿಷನ್ ಸಲ್ಲಿಸಲಾಗಿತ್ತು. ಯಾರ ಬಗ್ಗೆಯೂ ನಮಗೆ ದ್ವೇಷ ಇಲ್ಲ. ಆದರೆ ಸಾಂಪ್ರದಾಯಿಕ ಉಡುಗೆ ನಮ್ಮ ಹಕ್ಕು - ಭಾದ್ಯತೆಯಾಗಿದ್ದು, ಈ ಬಗ್ಗೆ ಪ್ರಯತ್ನ ಮಾಡಲಾಗಿದೆ. ಇದೀಗ ನಮ್ಮ ನಂಬಿಕೆ ಹಕ್ಕಿಗೆ ನ್ಯಾಯಾಲಯದಿಂದ ಸದ್ಯದ ಮಟ್ಟಿಗೆ ಜಯ ಲಭಿಸಿದೆ ಎಂದು ಅವರುಗಳು ನುಡಿದರು.