ಮಡಿಕೇರಿ, ಫೆ. ೧೩: ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವರ್ಷವಾದ ೨೦೨೫ ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕೊಡಗು ಕನ್ನಡ ಭವನದ ಅಧ್ಯಕ್ಷರಾಗಿ ಬೊಳ್ಳಜಿರ ಬಿ. ಅಯ್ಯಪ್ಪ ಅವರನ್ನು ರಾಜ್ಯ ಸಮಿತಿ ಆಯ್ಕೆ ಮಾಡಿದೆ.
ಉಪಾಧ್ಯಕ್ಷರಾಗಿ ತೆನ್ನೀರ ಟೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು, ಖಜಾಂಚಿಯಾಗಿ ವಿನೋದ್ ಕುಡ್ತೇಕರ್ ಹಾಗೂ ನಿರ್ದೇಶಕರುಗಳಾಗಿ ಅರುಣ್ ಕಡಗದಾಳು, ರುಬೀನಾ ಸೋಮವಾರಪೇಟೆ, ರಿಶಾ ಸೋಮವಾರಪೇಟೆ, ಹರ್ಷಿತಾ ಶೆಟ್ಟಿ ಗಾಳಿಬೀಡು, ಸಂಕೇತ್ ಕೆ.ಎ. ಗಾಳಿಬೀಡು, ಮಾಗಲು ಲೋಹಿತ್, ರಂಜಿತ್ ಜಯರಾಂ, ಲೋಕೇಶ್ ಕಾಟಕೇರಿ, ವತ್ಸಲಾ ಉಡೋತ್‌ಮೊಟ್ಟೆ, ಪೇರಿಯಂಡ ಜಯಂತಿ ಉತ್ತಪ್ಪ, ಚಿತ್ರಾ ಸುಜನ್ ಬಿ.ಎನ್., ಅಬ್ದುಲ್ಲಾ ಎಂ.ಎA., ವಿಶ್ವ ಕುಂಬೂರು, ವಿನೋದ್ ಕೆ.ಎಂ. ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.