ಐಗೂರು, ಫೆ. ೧೩: ಇಲ್ಲಿನ ರೋಹಿತ್ ಫ್ರೆಂಡ್ಸ್ ವತಿಯಿಂದ ಕಾಜೂರು ಶಾಲಾ ಮೈದಾನದಲ್ಲಿ ೧೬ ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ (ಕೆಸಿಎಂ) ತಂಡ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ ಅಪ್ ಸ್ಥಾನಕ್ಕೆ ಐಗೂರು ಆರ್.ಕೆ. ಹಿಟ್ಟರ್ಸ್ ತೃಪ್ತಿಪಟ್ಟುಕೊಂಡಿತು.

೧೭ ತಂಡಗಳ ಉದಯೋನ್ಮುಖ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಪಂದ್ಯಾಟದಲ್ಲಿ ಭಾಗವಹಿಸಿದ್ದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೆಟಿಪಿ ಕೊಡ್ಲಿಪೇಟೆ, ಆರ್‌ಕೆ ಹಿಟ್ಟರ್ಸ್ ಐಗೂರು ಮತ್ತು ಐಗೂರು ಕ್ಲಾಸರ್ಸ್ ತಂಡಗಳು ಸೆಮಿಫೈನಲ್ ಹಂತದವರೆಗೆ ಸೆಣಸಾಟ ನಡೆಸಿ, ಕೊನೆಗೆ ಆರ್‌ಕೆ ಹಿಟ್ಟರ್ಸ್ ಐಗೂರು ಮತ್ತು ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ತಂಡಗಳು ಫೈನಲ್‌ನಲ್ಲಿ ಸೆಣಸಾಡಿದವು.

ಪಂದ್ಯಾಟದ ಮ್ಯಾನ್ ಆಫ್ ಸೀರಿಸ್ ಪ್ರಶಸ್ತಿಯನ್ನು ಕೆಸಿಎಂ ತಂಡದ ಹಾರ್ದಿಕ್, ಉತ್ತಮ ದಾಂಡಿಗ ಪ್ರಶಸ್ತಿ ಆರ್‌ಕೆ ಹಿಟ್ಟರ್ಸ್ನ ಲಿಖಿತ್, ಉತ್ತಮ ಎಸೆತಗಾರ ಆರ್‌ಕೆ ಹಿಟ್ಟರ್ಸ್ನ ದೇಸಿಕ್ ಪ್ರಶಸ್ತಿಯನ್ನು ಪಡೆದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಐಗೂರಿನ ಯತೀಶ್ ರೈ, ಕಾಜೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಐಗೂರಿನ ಅಭಿಜಿತ್ ಭಾಗವಹಿಸಿದ್ದರು.

ಗಮನ ಸೆಳೆದ ಹಾರ್ದಿಕ್

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ತಂಡದ ಪರ ಆಡಿದ ಹಾರ್ದಿಕ್ ಕರ್ಕೇರ ತನ್ನ ಪ್ರಬಲ ಬ್ಯಾಟಿಂಗ್‌ನಿAದ ಟೂರ್ನಿಯ ಗಮನ ಸೆಳೆದರು. ಪಂದ್ಯಾಟದಲ್ಲಿ ಹಾರ್ದಿಕ್ ಕರ್ಕೇರ, ಕೇವಲ ೯ ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮತ್ತು ಒಟ್ಟು ೧೪ ಎಸೆತಗಳಲ್ಲಿ ೭೪ ರನ್‌ಗಳಿಸಿ ಟೂರ್ನಮೆಂಟ್‌ನ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಬರೆದಿದ್ದಾರೆ.

ಬೌಲಿಂಗ್‌ನಲ್ಲಿ ಪವನ್ ಮತ್ತು ಸುಮಿತ ತಲಾ ೨ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.