*ಗೋಣಿಕೊಪ್ಪ, ಫೆ. ೧೨: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ತಾ. ೨೨ ರಂದು ಗೋಣಿಕೊಪ್ಪ ಕ್ಯಾಲ್ಸ್ ಶಾಲಾ ಮೈದಾನದಲ್ಲಿ ೧೪ ರಿಂದ ೧೬ ವಯೋಮಿತಿಯ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ.
೧೪ ವಯೋಮಿತಿ ಬಾಲಕರು ಹಾಕಿ ಕ್ರೀಡೆ ಆಯ್ಕೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ೧೪-೧೬ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಅಥ್ಲೆಟಿಕ್ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ.
ಉತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಿಂಥೆಟಿಕ್ ಅಥ್ಲೆಟಿಕ್ ಟ್ರಾö್ಯಕ್ ಮತ್ತು ಆಸ್ಟೊçÃಟರ್ಫ್ ಮೈದಾನದಲ್ಲಿ ತರಬೇತಿ ನೀಡಲಾಗುವುದು. ತಾ. ೧೯ ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ೯೫೬೭೭೪೬೪೪೩, ೯೯೮೦೫೨೩೪೪೩ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.