ವೀರಾಜಪೇಟೆ, ಫೆ. ೧೩: ಕೂರ್ಗ್ ಕಾವೇರಿ ಬ್ರಿಗೇಡರ್ ವೀರಾಜಪೇಟೆ ಇವರ ಆಶ್ರಯದಲ್ಲಿ ಜರುಗುತ್ತಿರುವ ೯ನೇ ವರ್ಷದ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಲಾಂಛನವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅನಾವರಣಗೊಳಿಸಿದರು.

ವೀರಾಜಪೇಟೆ ತಾಲೂಕು ಮೈದಾನದಲ್ಲಿ ತಾ. ೨೧, ೨೨ ಹಾಗೂ ೨೩ ರಂದು ನಡೆಯುವ ಪಂದ್ಯಾಟದಲ್ಲಿ ರಾಷ್ಟçಮಟ್ಟದ ಅನುಭವಿ ತಂಡಗಳು ಭಾಗವಹಿಸುತ್ತಿದ್ದು, ಸ್ಥಳೀಯ ಹಾಗೂ ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳಿಗೆ ಪಂದ್ಯಾಟದ ರಸದೌತಣ ಒದಗಿಸಲಿದೆ ಎಂದು ಆಯೋಜಕರು ಈ ಸಂದರ್ಭ ತಿಳಿಸಿದರು.