ಸಿದ್ದಾಪುರ, ಫೆ. ೧೩: ಅಮ್ಮತ್ತಿಯ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ದೇವಾಲ ಯದ ೨೫ನೇ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಆಚರಿಸಲಾಯಿತು.
ದೇವಾಲಯದಲ್ಲಿ ಅಭಿಷೇಕ ಪೂಜೆ ಹಾಗೂ ಅಲಂಕಾರ ಪೂಜೆ. ನಾಗ ಪೂಜೆ, ನಾಗಹೋಮ, ಆಶ್ಲೇಷ ಬಲಿ, ದುರ್ಗಾಪೂಜೆ, ದುರ್ಗಾಹೋಮ ನಡೆಯಿತು. ರಾತ್ರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಪಂಜುರ್ಲಿ, ಪಾಷಾಣಮೂರ್ತಿ ಹಾಗೂ ಗುಳಿಗ ದೇವರುಗಳ ತೆರೆ ಬೆಳಗಿನ ಜಾವದವರೆಗೆ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ ಹಾಗೂ ಹಗಲು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಮಹೋತ್ಸವಕ್ಕೆ ಆಗಮಿಸಿದ್ದರು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಕುಟ್ಟಂಡ ಸರಸ್ವತಿ ಹಾಗೂ ಲೋಕೇಶ್ ಮುತ್ತಪ್ಪ, ಖಜಾಂಚಿ ಉದ್ದಪಂಡ ಖುಷಿ ಅಯ್ಯಪ್ಪ ಇನ್ನಿತರರು ಹಾಜರಿದ್ದರು.