೨೦೧೯ರ ಫೆಬ್ರವರಿ ತಿಂಗಳು ಹದಿನಾಲ್ಕನೆಯ ದಿನಾಂಕದAದು ಅಪರಾಹ್ನವಾಗಿದ್ದರೂ ಚಳಿಯ ತೀವ್ರತೆ ಕಡಿಮೆಯಾಗಿರಲಿಲ್ಲ. ಭಾರತದ ಶಿಖರವೆನಿಸಿದ ಜಮ್ಮು-ಕಾಶ್ಮೀರ ರಾಜ್ಯದ ಪುಲ್ವಾಮ ಜಿಲ್ಲೆಯಲ್ಲಿ ಸುಮಾರು ೨,೫೦೦ ಕೇಂದ್ರೀಯ ಮೀಸಲು ಆರಕ್ಷಣಾ ಪಡೆಯ ಸಿಬ್ಬಂದಿಗಳನ್ನು ೭೮ ವಾಹನಗಳಲ್ಲಿ ತುಂಬಿಕೊAಡು ಜಮ್ಮು-ಕಾಶ್ಮೀರದೆಡೆಗೆ ಆ ಕೇರವಾನ್ ಸಾಗುತ್ತಿತ್ತು. ಅದರಲ್ಲಿದ್ದ ಕೆಲವರಿಗೆ ವಾರ್ಷಿಕ ರಜೆಯಲ್ಲಿ ಮನೆಗೆ ತೆರಳುವ ಕಾತರವಿದ್ದರೆ ಇನ್ನು ಕೆಲವರಿಗೆ ತಮ್ಮ ಬಂಧುಬಳಗದವರನ್ನು ನೋಡುವ ಸಂಭ್ರಮ. ಇನ್ನು ಕೆಲವರಿಗೆ ದೂರದ ತಾಣಕ್ಕೆ ವರ್ಗವಾಗಿ ಹೋಗುವ ನಿರೀಕ್ಷೆಗಳಿದ್ದವು. ಈ ಬಯಕೆಗಳೆಲ್ಲವೂ ಆ ಅಪರಾಹ್ನ ಸುಮಾರು ಮೂರು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ಎಲ್ಲರಲ್ಲೂ ಕಮರಿಹೋದುವು.

ಪಾಕಿಸ್ತಾನದ ಬೆಂಬಲದೊAದಿಗೆ ೨೨ ವರ್ಷದ ಅದಿಲ್ ಅಹ್ಮದ್ ಧರ್ ಎನ್ನುವ ಜೈಶೆ-ಎ-ಮೊಹಮ್ಮದ್ ಸಂಘಟನೆಯ ಆತಂಕಕಾರಿಯೊಬ್ಬ ಬಾಂಬು ತುಂಬಿದ ವಾಹನವನ್ನು ಈ ಸೇನಾ ಸಿಬ್ಬಂದಿಗಳ ವಾಹನಕ್ಕೆ ಡಿಕ್ಕಿಹೊಡೆಸಿ ತೀವ್ರ ಪ್ರಮಾಣದಲ್ಲಿ ಸ್ಘೋಟ ಮಾಡಿಬಿಟ್ಟನು. ಈ ಸ್ಘೋಟದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಭಾರತದ ಯೋಧರು ಹುತಾತ್ಮರಾದರೆ ಅದನ್ನು ಮೀರಿದ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಗಳು ಗಾಯಗೊಂಡರು. ಭಾರತದ ಇತಿಹಾಸದಲ್ಲಿ ಸೇನೆಯೊಂದನ್ನು ಯಾವುದೇ ಮುನ್ಸೂಚನೆಯನ್ನೂ ನೀಡದೆ ಈ ಪ್ರಮಾಣದಲ್ಲಿ ನಾಶಗೈದಿರುವುದು ಒಂದು ಕಪ್ಪುಚುಕ್ಕೆಯಾಗಿ ಉಳಿದೇಹೋಯಿತು.

ಪಾಕಿಸ್ತಾನದ ಬೆಂಬಲ ಹೊಂದಿರುವ ಜೈಶೆ-ಎ-ಮೊಹಮ್ಮದ್ ಸಂಘಟನೆ ಈ ದುಷ್ಕೃತ್ಯವನ್ನು ನಡೆಸಲು ಕೆಲವು ಕಾರಣಗಳೂ ಇದ್ದುವು. ಭಾರತ ಮತ್ತು ಪಾಕಿಸ್ತಾನವೆಂಬ ರಾಷ್ಟçಗಳು ಬ್ರಿಟಿಷ್ ಆಡಳಿತದಿಂದ ಮುಕ್ತಗೊಂಡಮೇಲೆ ಪಾಕಿಸ್ತಾನಕ್ಕೆ ಭಾರತದ ಮೇಲೆ ವೈರತ್ವ ಹೆಚ್ಚಾಗತೊಡಗಿತು. ಸ್ವಾತಂತ್ರö್ಯ ನಂತರ ಮೂರು ಬಾರಿ ಅದು ಭಾರತದ ವಿರುದ್ಧ ಯುದ್ಧ ನಡೆಸಿದರೂ ಭಾರತದ ಸೈನಿಕರು ಎದುರುನಿಂತು ಕೊಟ್ಟ ಏಟಿನ ನೋವು ಪಾಕಿಸ್ತಾನದ ನಾಯಕರ ಮನದಾಳದಲ್ಲಿ ಉಳಿದುಹೋಗಿತ್ತು. ಈಗ ಅವರಿಗೆ ಎದುರು ನಿಂತು ಹೋರಾಡುವ ಸೈರ್ಯವೂ ಇರಲಿಲ್ಲ, ಸಾಮರ್ಥ್ಯವೂ ಇರಲಿಲ್ಲ. ಹಾಗಾಗಿ ವಾಮಮಾರ್ಗಗಳಿಂದ ದಾಳಿ ಮಾಡಿ ಭಾರತದ ಸೈನ್ಯದ ನೈತಿಕತೆ ಕುಗ್ಗಿಸುವುದು ಅವರ ಧ್ಯೇಯವಾಗಿತ್ತು. ಎರಡನೆಯದಾಗಿ ಕಾಶ್ಮೀರವು ಎರಡು ರಾಷ್ಟçಗಳಿಗೂ ವಿವಾದಿತ ಗಡಿಯಾಗಿದ್ದು ಕೆಲವು ದಶಕಗಳಿಂದ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇತ್ತು. ಈ ಕಣಿವೆಯ ಕೆಲವು ಭಾಗಗಳು ತಮ್ಮದೆಂದು ಅವರು ವಾದಿಸುತ್ತಲೇ ಬಂದಿದ್ದರೂ ಭಾರತ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಮೂರನೆಯದಾಗಿ ಅದಿಲ್ ಅಹ್ಮದ್ ದಾಲ್ ಎನ್ನುವ ೨೨ ವರ್ಷದ ಯುವಕನಿಗೆ ಭಾರತದ ರಕ್ಷಣಾಪಡೆಗಳು, ಈ ಹಿಂದೆ ಹಲವು ಬಾರಿ ಭಾರತದ ಪೊಲೀಸರು ಹೊಡೆತ ನೀಡಿದುದರಿಂದ ಅವನ ಮನಸ್ಥಿತಿ ಕೆಟ್ಟು ಭಾರತೀಯರನ್ನು, ಭಾರತದ ರಕ್ಷಣಾ ಪಡೆಗಳನ್ನು ದ್ವೇಷಿಸುತ್ತಿದ್ದ. ಆ ದ್ವೇಷ ತೀರಿಸಿಕೊಳ್ಳಲು ಅವನು ಈ ವಾಮ ಮಾರ್ಗವನ್ನು ಅನುಸರಿಸಿದನೆಂದು ಅವನ ಮನೆಯವರು ವಾದಿಸಿದರು. ಹೀಗಾಗಿ ೧೯೮೦ರ ಅನಂತರದ ಕಾಲಾವಧಿಯಲ್ಲಿ ಕಾಶ್ಮೀರದಲ್ಲಿ ಇದು ಮಾರಣಾಂತಿಕ ದಾಳಿ ಎನ್ನಿಸಿಕೊಂಡಿತು.

ಈ ದಾಳಿಯ ಅನಂತರ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿತು. ಮೊದಲನೆಯದಾಗಿ ಭಾರತ ಪಾಕಿಸ್ತಾನಕ್ಕೆ ಕೊಟ್ಟ ಹೆಚ್ಚಿನ ಸ್ಥಾನಮಾನವನ್ನು ತೆಗೆದುಹಾಕಿತು. ಎರಡನೆಯದಾಗಿ ಅಂರ‍್ರಾಷ್ಟಿçÃಯ ಕೂಟಗಳಿಗೆ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿ ಮಾಡಲು ಒತ್ತಡ ಹೇರಿತು. ಮೂರನೆಯದಾಗಿ ಆರ್ಥಿಕವಾಗಿಯೂ ಪಾಕಿಸ್ತಾನವನ್ನು ಭಾರತವು ಕಂಗೆಡಿಸಿತು. ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ವಸ್ತುಗಳಿಗೆ ಶೇ. ೨೦೦ ರಷ್ಟು ಸುಂಕ ಹೇರಿ ಪಾಕಿಸ್ತಾನದ ರಫ್ತನ್ನು ಕೆಡಿಸಿಹಾಕಿತು. ನಾಲ್ಕನೆಯದಾಗಿ ಭಾರತದ ವಾಯುಪಡೆಯು ಅದೇವರ್ಷ ಫೆಬ್ರವರಿ ೨೬ ರಂದು ವಿಮಾನದಲ್ಲಿ ದಾಳಿ ಮಾಡಿ ಜೈಶೇ-ಎ-ಮೊಹಮ್ಮದ್ ಸಂಘದ ಆತಂಕಕಾರಿಗಳ ನೆಲೆಯನ್ನು ಬಾಲಕೋಟ್‌ನಲ್ಲಿ ನಾಶಪಡಿಸಿತು. ಅನಂತರ ಸರ್ಜಿಕಲ್ ಸ್ಟೆçöÊಕ್ ನಡೆಸಿ ಪಾಕಿಸ್ತಾನದ ಆತಂಕಕಾರಿಗಳ ಮೂಲನೆಲೆಯನ್ನು ಸಹ ಗಡಿ ನಿಯಂತ್ರಣ ರೇಖೆಯಲ್ಲಿ ನಾಶಪಡಿಸಿತು. ರಾಷ್ಟಿçÃಯ ತನಿಖಾದಳವು ಈ ಬಗ್ಗೆ ತನಿಖೆ ನಡೆಸಿ ಆಗಸ್ಟ್ ೨೦೨೧ ರೊಳಗೆ ಏಳು ಉಗ್ರಗಾಮಿಗಳನ್ನು ಕೊಂದಿತಲ್ಲದೆ ಏಳು ಉಗ್ರರನ್ನು ಬಂಧಿಸಿತು.

ಇದರೊAದಿಗೆ ಭಾರತ ಸರಕಾರವು ಜಮ್ಮು-ಕಾಶ್ಮೀರದ ನೆಲೆಗಳಲ್ಲಿ ತನ್ನ ಸೇನೆಯ ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸಿತು. ಕೊನೆಯದಾಗಿ ಈ ದಾಳಿಯಿಂದ ಹುತಾತ್ಮರಾದ ಮತ್ತು ಗಾಯಗೊಂಡ ಸೈನಿಕರ ಕುಟುಂಬಗಳಿಗೆ ಸೂಕ್ತವಾದ ಆರ್ಥಿಕ ನೆರವನ್ನು ಘೋಷಿಸಿ ಅವರ ಮನಸ್ಸಿಗಾದ ನೋವನ್ನು ಕಡಿಮೆಮಾಡಲು ಯತ್ನಿಸಿತು.

ಅದೇನೇ ಆದರೂ ಇಂತಹ ಹೇಡಿತನದ, ಹೀನಾಯಮಾನವಾದ ಕೆಲಸವನ್ನು ಎಲ್ಲ ರಾಷ್ಟçಗಳೂ ಒಕ್ಕೊರಲಿನಿಂದ ಖಂಡಿಸಿ ಭಾರತಕ್ಕೆ ತನ್ನ ಸಾಂತ್ವನ ಹೇಳಿದ್ದಲ್ಲದೆ ತನ್ನ ಸಂತಾಪವನ್ನೂ ತೋರಿದವು. ಭಾರತ ಸರಕಾರವೂ ಅನಂತರದ ದಿನಗಳಲ್ಲಿ ಹೀಗೆ ಸೈನಿಕ ಕಾರವಾನ್‌ಗಳು ಸಾಗುವಾಗ ದಾರಿಯಲ್ಲಿ ಬರುವವರ ತಪಾಸಣೆ ಮಾಡಿ ಅನುಮಾನ ಬಂದ ಕಡೆಗಳಲ್ಲಿ ತೀವ್ರವಾದ ಕ್ರಮ ತೆಗೆದುಕೊಳ್ಳಲು ಆರಂಭ ಮಾಡಿತು. ಒಟ್ಟಿನಲ್ಲಿ, ಇದೊಂದು ತೀರ ಅಮಾನವೀಯವೂ ಹೇಡಿತನವೂ ಆದ ದಾಳಿಯಾಗಿದ್ದು, ಭಾರತ ತನ್ನ ಸೈನಿಕರನ್ನು ಕಳೆದುಕೊಂಡರೂ ಇತರ ಸೈನಿಕರ ಮೇಲೆ ಹೆಚ್ಚಿನ ರಕ್ಷಣೆ ನೀಡಿ ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿತು.

- ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು ಮೊ. ೯೧೪೧೩೯೫೪೨೬.