ಮಡಿಕೇರಿ, ಫೆ. ೧೨ : ನಗರದಲ್ಲಿರುವ ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ೧೬ ನಿರ್ದೇಶಕತು ನೇಮಕಗೊಂಡರು. ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾಗಿ ಪಿ.ಎಸ್. ಅರವಿಂದ, ಶ್ಯಾಮಲ ಎಂ.ಎA., ಗೀತಾ ಗಿರೀಶ್, ಬೇಬಿ ಪೂವಯ್ಯ, ಮೋಂತಿ ಗಣೇಶ್, ಸುನೀತ ಪಿ.ಎನ್., ವಿ.ಕೆ. ಪ್ರೇಮಕುಮಾರಿ, ಕಮಲ ಮುರುಗೇಶ್, ಆಶಾ ಚಿಣ್ಣಪ್ಪ, ಜಯಲೀಲ ಸತೀಶ್, ಲೀಲಾ ಮೇದಪ್ಪ, ಅಂಬಿಕಾರಾವ್ ವಿ., ಟಿ.ಪಿ. ಜಯ, ಯಶೋಧ ಹೆಚ್.ಬಿ., ಧರ್ಮಾವತಿ ಎಂ.ಎA. ಹಾಗೂ ಕಸ್ತೂರಿ ಎನ್.ಎ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.