ಕೂಡಿಗೆ, ಫೆ. ೧೨: ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘ, ಕೋರಮಂಡಲ್ ಇಂಟರ್ ನ್ಯಾಶನಲ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ ಶುಂಠಿ ಮತ್ತು ಅಡಿಕೆ ಬೆಳೆಗಳಿಗೆ ಸಂಬAಧಿಸಿದAತೆ ಮಾಹಿತಿ ಕಾರ್ಯಾಗಾರವು ಸಂಘದ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ಕುಮಾರ್ ನೆರವೇರಿಸಿ ನಂತರ ಮಾತನಾಡಿ, ರೈತರು ಅಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯ ಮೂಲಕ ಬೇಸಾಯ ಮಾಡುವ ಮೂಲಕ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಇಂತಹ ಕೃಷಿ ಮಾಹಿತಿ ಕಾರ್ಯಾಗಾರವು ರೈತರಿಗೆ ಸಹಕಾರಿಯಾಗುವುದು, ರೈತರು ಉತ್ತಮ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಪೂರಕವಾಗುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿಗೆ ಸಂಬAಧಿಸಿದAತೆ ಕೋರಮಂಡಲ್ ಇಂಟರ್ನ್ಯಾಶನಲ್ ಲಿಮಿಟೆಡ್ನ ಪ್ರಮೀಣ್, ಅಕ್ಷಯ್, ಡಾ. ರಾಜಶೇಖರ್, ಹರೀಶ್ ಹೆಗಡೆ, ಬೆಳೆಯ ಫಲವತ್ತತೆಯ ಬಗ್ಗೆ ಮತ್ತು ರೈತರ ಜಮೀನಿನ ಮಣ್ಣು ಪರೀಕ್ಷೆಗೆ ಸಂಬAಧಿಸಿದAತೆ ಸಂಪೂರ್ಣವಾದ ಮಾಹಿತಿಯನ್ನು ರೈತರಿಗೆ ತಿಳಿಸಿದರು.
ಸಹಕಾರ ಸಂಘದ ವ್ಯಾಪ್ತಿಯ ಪ್ರಗತಿಪರ ರೈತರಾದ ಸೋಮಶೇಖರ್, ಮತ್ತು ಕೆ.ಸಿ. ಅನಿಲ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ. ಕೆ.ಪಿ. ರಾಜು, ರಾಮಚಂದ್ರ, ಎಸ್. ಎಸ್. ಕೃಷ್ಣ, ಕೃಷ್ಣ ಗೌಡ, ರಮೇಶ್, ಪ್ರಗತಿಪರ ರೈತರಾದ. ಸೋಮಶೇಖರ್, ಕೆ.ಸಿ. ಅನಿಲ್ ಕುಮಾರ್, ಮತ್ತಿತರರು ಭಾಗವಹಿಸಿದ್ದರು.