ಸೋಮವಾರಪೇಟೆ, ಫೆ. ೧೨: ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಅನುದಾನ ತಂದರೂ ಸಹ ಸ್ಥಳೀಯವಾಗಿ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಗೊಳಿಸದೇ ಕಾಲಹರಣ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಯಂತೂ ಒಪ್ಪಿಕೊಳ್ಳಲು ಅಸಾಧ್ಯವಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಕೆಡಿಪಿ ಸಭೆಯಲ್ಲಿ ಗರಂ ಆದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು, ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭ, ಲೋಕೋಪಯೋಗಿ ಇಲಾಖೆಯ ಅಭಿಯಂತರರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಮಟ್ಟದಲ್ಲಿ ಸಚಿವರುಗಳನ್ನು ಭೇಟಿ ಮಾಡಿ, ಅನುದಾನ ತಂದರೆ, ಸ್ಥಳೀಯವಾಗಿ ಅಧಿಕಾರಿಗಳು ಅನುಷ್ಠಾನಗೊಳಿಸದೇ ಕಾಲಹರಣ ಮಾಡುತ್ತಿದ್ದಾರೆ. ಅದರಲ್ಲೂ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿ ಸಹಿಸಲು ಅಸಾಧ್ಯವಾಗಿದೆ ಎಂದು ಅಭಿಯಂತರ ವೆಂಕಟೇಶ್ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಶನಿವಾರಸAತೆ-ದುAಡಳ್ಳಿ-ಯಸಳೂರು ಮುಖ್ಯರಸ್ತೆ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊAಡಿದ್ದರೂ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸದೇ ಅರಣ್ಯ ಇಲಾಖೆಯ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಐಗೂರು ಕಬ್ಬಿಣ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ್ದರೂ ಈವರೆಗೆ ಕಾಮಗಾರಿ ಆರಂಭಿಸಿಲ್ಲ. ರಸ್ತೆ ಬದಿ ಕಾಡು ತೆರವುಗೊಳಿಸುವ ಕಾಮಗಾರಿಯೂ ನಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಅಲ್ಪಾವಧಿಯಲ್ಲಿಯೇ ಕೇವಲ ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದAತೆ ೯೦ ಕೋಟಿ ಅನುದಾನ ತಂದಿದ್ದರೂ ನಿರೀಕ್ಷಿತವಾಗಿ ಕೆಲಸ ನಡೆಯುತ್ತಿಲ್ಲ. ಐಗೂರು ಕಬ್ಬಿಣ ಸೇತುವೆ ಕಾಮಗಾರಿಯನ್ನು ತಾ. ೧೬ರೊಳಗೆ ಪ್ರಾರಂಭಿಸಬೇಕು. ತಪ್ಪಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಶನಿವಾರಸಂತೆ-ಯಸಳೂರು ರಸ್ತೆಯ ಬದಿಯಿರುವ ಮರಗಳನ್ನು ತೆರವುಗೊಳಿಸಿ ಇದೇ ತಾ. ೨೦ರೊಳಗೆ ಕೆಲಸ ಆರಂಭಿಸಬೇಕು. ಜಂಗಲ್ ಕಟ್ಟಿಂಗ್ ಸಮರ್ಪಕವಾಗಿ ನಡೆಯಬೇಕು. ಮೇ ಅಂತ್ಯದೊಳಗೆ ರಸ್ತೆ ನಿರ್ವಹಣೆ ಕೆಲಸಗಳು ಪೂರ್ಣಗೊಳ್ಳಬೇಕು. ಇಲಾಖೆಯ ಅಭಿಯಂತರರು

(ಮೊದಲ ಪುಟದಿಂದ) ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ನಾವುಗಳೇ ದೊಡ್ಡ ಬದಲಾವಣೆಗೆ ಮುಂದಾಗಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಲೋಕೋಪಯೋಗಿ ಇಲಾಖೆಗೆ ಸೇರುವ ರಸ್ತೆಗಳ ವಾರ್ಷಿಕ ನಿರ್ವಹಣೆ ಸಮರ್ಪಕವಾಗಿಲ್ಲ. ರಸ್ತೆ ಬದಿ ಕಾಡುಗಳನ್ನು ತೆರವುಗೊಳಿಸದೇ ಬಿಲ್ ಮಾಡಿಕೊಳ್ಳಲಾಗುತ್ತಿದೆ. ಟೆಂಡರ್‌ನ್ನು ಶೇ. ೩೦ರಷ್ಟು ಕಡಿಮೆ ಮಾಡಿಕೊಂಡು ಗುತ್ತಿಗೆ ಪಡೆಯಲಾಗುತ್ತಿದೆ. ಇದು ಬದಲಾಗಬೇಕು. ಅಭಿಯಂತರರು ಗುತ್ತಿಗೆದಾರರೊಂದಿಗೆ ಶಾಮೀಲಾಗಬಾರದು. ಮೇ ಅಂತ್ಯದೊಳಗೆ ಜಂಗಲ್ ಕಟ್ಟಿಂಗ್ ಪೂರ್ಣಗೊಳ್ಳಬೇಕೆಂದು ಅಭಿಯಂತರ ವೆಂಕಟೇಶ್ ನಾಯಕ್ ಅವರಿಗೆ ತಾಕೀತು ಮಾಡಿದರು.

ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಹಾರ ಕ್ರಮಗಳನ್ನು ತ್ವರಿತಗೊಳಿಸಬೇಕು. ಕೃಷಿ ಫಸಲು ನಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕು. ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ಸಭೆಯಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಆಲೂರು ಸಿದ್ದಾಪುರ, ಬಾಣಾವರ ಭಾಗದಲ್ಲಿ ಎರಡು ಕಾಡಾನೆಗಳು ನಿರಂತರ ಉಪಟಳ ನೀಡುತ್ತಿದ್ದು, ಇವುಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಕ್ರಮ ವಹಿಸುವಂತೆ ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರ ಅವರುಗಳಿಗೆ ಮಂತರ್ ಗೌಡ ಸೂಚನೆ ನೀಡಿದರು.

ಅರಣ್ಯ ಇಲಾಖೆಯ ಬೌಂಡರಿಯೊಳಗೆ ಮಾತ್ರ ರೈಲ್ವೇ ಬ್ಯಾರಿಕೇಡ್ ಅಳವಡಿಸಬೇಕು. ಅಕ್ಕಪಕ್ಕದ ಸ್ವಂತ ಜಾಗ, ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಬಳಸಿಕೊಂಡು ಬ್ಯಾರಿಕೇಡ್ ನಿರ್ಮಾಣ ಮಾಡಬಾರದು ಎಂದು ಇದೇ ಸಂದರ್ಭ ನಿರ್ದೇಶನ ನೀಡಿದರು.

ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಚೆಕ್‌ಪೋಸ್ಟ್ನಲ್ಲಿ ಹಗಲಿನ ವೇಳೆಯಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ. ಯಾವುದೇ ವಾಹನಗಳ ತಪಾಸಣೆ ನಡೆಸುತ್ತಿಲ್ಲ. ಅಕ್ರಮವಾಗಿ ಮರ, ಗೋವುಗಳ ಸಾಗಾಟವೂ ಆಗುತ್ತಿದ್ದರೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ನಾಮನಿರ್ದೇಶನ ಸದಸ್ಯ ವೇದಕುಮಾರ್ ಆರೋಪಿಸಿದರು.

ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದ ಮೂಲಕ ತಾಲೂಕಿಗೆ ೯.೮೩ ಕೋಟಿ ಅನುದಾನ ಬಿಡುಗಡೆಯಾಗಿದ್ದು, ೧೨೪ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗಣಗೂರು, ಆಲೂರುಸಿದ್ದಾಪುರ, ಬೇಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲಸ ಆರಂಭಗೊAಡಿದೆ ಎಂದು ಅಭಿಯಂತರ ನಾರಾಯಣಮೂರ್ತಿ ಅವರು ಸಭೆಗೆ ತಿಳಿಸಿದರು.

ಇದರೊಂದಿಗೆ ಜಿ.ಪಂ.ಗೆ ೧೦ ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಇದಕ್ಕೂ ಕಾಮಗಾರಿಗಳ ಪಟ್ಟಿ ತಯಾರಿಸಬೇಕು. ಮಾರ್ಚ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕೆಂದು ಶಾಸಕರು ಸೂಚಿಸಿದರು.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ೧.೬೫ ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಗೊAಡಿದೆ. ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶೌಚಾಲಯ ನಿರ್ಮಾಣ, ಛಾವಣಿ ದುರಸ್ತಿ, ಸುಣ್ಣ ಬಣ್ಣ ಬಳಿಯುವ ಕಾಮಗಾರಿ ನಿರ್ವಹಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್ ಅವರಿಗೆ ನಿರ್ದೇಶಿಸಿದರು.

ಆಸ್ಪತ್ರೆಯನ್ನು ದಿನಕ್ಕೆ ೨ ರಿಂದ ೩ ಬಾರಿ ತಪ್ಪದೇ ಶುಚಿಗೊಳಿಸಬೇಕು. ಆ್ಯಂಬ್ಯುಲೆನ್ಸ್ ರಿಪೇರಿಗೆ ಅನುದಾನ ಬಿಡುಗಡೆಯಾಗಿದ್ದು, ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಶಾಸಕರು ತಿಳಿಸಿದರು. ಕೊಡ್ಲಿಪೇಟೆ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯ ವೇದಕುಮಾರ್ ಮನವಿ ಮಾಡಿದರೆ, ಶನಿವಾರಸಂತೆ ಆಸ್ಪತ್ರೆಯಲ್ಲಿ ಶವಾಗಾರ ಕೊಠಡಿ ನಿರ್ಮಿಸಿದ್ದರೂ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಶರತ್ ಶೇಖರ್ ದೂರಿದರು.

ಶನಿವಾರಸಂತೆ ಆಸ್ಪತ್ರೆಗೆ ವೈದ್ಯರೇ ಇಲ್ಲ. ಸ್ತಿçà ರೋಗ ತಜ್ಞರು ಇಲ್ಲದೇ ಇರುವುದರಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯ ಗಮನ ಸೆಳೆಯಲಾಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ಆಸ್ಪತ್ರೆಗೆ ಸೇರಿ ಈರ್ವರೇ ಸ್ತಿçà ರೋಗ ತಜ್ಞರಿದ್ದಾರೆ. ಹೊಸದಾಗಿ ಯಾವ ವೈದ್ಯರೂ ಬರುತ್ತಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಇಂದೂಧರ್ ಅಸಹಾಯಕತೆ ವ್ಯಕ್ತಪಡಿಸಿದರು.

ಉಳಿದಂತೆ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಭಾಗಿಯಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳು, ತಮ್ಮ ಇಲಾಖಾ ಕಾರ್ಯಕ್ರಮಗಳು, ಆಗಿರುವ ಪ್ರಗತಿ ಬಗ್ಗೆ ಸಭೆಗೆ ವರದಿ ನೀಡಿದರು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ತಹಶೀಲ್ದಾರ್ ಕೃಷ್ಣಮೂರ್ತಿ ಅವರುಗಳು ಉಪಸ್ಥಿತರಿದ್ದರು.