ಮುಳ್ಳೂರು, ಫೆ. ೧೨: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಆಲೂರುಸಿದ್ದಾಪುರ ಮತ್ತು ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಯೋಜನೆಯ ಡಿಯಲ್ಲಿ ಬಿಡುಗಡೆ ಯಾದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಮುಕ್ತಾಯ ಗೊಂಡಿರುವ ವಿವಿಧ ಕಾಮಗಾರಿ ಯನ್ನು ಲೋಕಾರ್ಪಣೆ ಗೊಳಿಸಿದರು.

ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಯೋಜನೆಯಡಿಯಲ್ಲಿ ರೂ. ೬೦ ಲಕ್ಷ ಮಂಜೂರಾದ ವಿವಿಧ ಕಾಮಗಾರಿ ಗಳಿಗೆ ಭೂಮಿಪೂಜೆ ನೆರವೇರಿಸಿದರು ಇದರಲ್ಲಿ ಅಂಕನಹಳ್ಳಿಯಿAದ ಸೀಗೆಮರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಚಿಕ್ಕ ಕಣಗಾಲು ಗ್ರಾಮದಿಂದ ಕೆರೆಯ ಡಾಂಬರಿ ರಸ್ತೆ ದುರಸ್ತಿ, ಆಲೂರುಸಿದ್ದಾಪುರದಿಂದ ಗಣಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ, ಕಡ್ಲೆಮಕ್ಕಿ ಜೆಲ್ಲಿ ರಸ್ತೆ ದುರಸ್ತಿ ಕಾಮಗಾರಿ, ಆಲೂರು-ಸಿದ್ದಾಪುರ ಮುಖ್ಯ ರಸ್ತೆಯಿಂದ ನಾಲೆ ರಸ್ತೆ ದುರಸ್ತಿ, ಹೊಸಗುತ್ತಿ-ಮಾಲಂಬಿ ಲಿಂಕ್ ರಸ್ತೆ, ಹೊಸಗುತ್ತ-ಹೊಸಳ್ಳಿ ಯಿಂದ ಮುಳ್ಳೂರಿಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ದುರಸ್ತಿ, ಮಾಲಂಬಿ ಕಣಿವೆಬಸವನಹಳ್ಳಿ ಡಾಂಬರು ರಸ್ತೆ ದುರಸ್ತಿ, ಆಲೂರು ದೊಡ್ಡಳ್ಳಿ ಜೆಲ್ಲಿ ರಸ್ತೆ ದುರಸ್ತಿ ಕಾಮಗಾರಿ, ಕಂತೆಬಸವನಹಳ್ಳಿ ಜೆಲ್ಲಿ ರಸ್ತೆ ದುರಸ್ತಿ, ಮಾಲಂಬಿಯಿAದÀ ಬೆಟ್ಟಕ್ಕೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ನಿರ್ಮಾಣ, ಮಾಲಂಬಿ ಗಿರಿಜನರ ಕಾಲೋನಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ, ದೊಡ್ಡಳ್ಳಿ-ಸಂಗಯ್ಯನಪುರ ರಸ್ತೆ ದುರಸ್ತಿ ಕಾಮಗಾರಿ, ಹಾರಳ್ಳಿ ಮುಳ್ಳೂರು ಡಾಂಬರಿ ರಸ್ತೆ ದುರಸ್ಥಿ, ಬಡುಬನಹಳ್ಳಿ ಮಾಗಲು ಗ್ರಾಮದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ, ಮಾಲಂಬಿ ಬಕ್ವಳನ ಕೆರೆ ಮಾರ್ಗವಾಗಿ ಗಣಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಡಾಂಬರಿ ರಸ್ತೆ ನಿರ್ಮಾಣ ಹಾಗೂ ಮಾಲಂಬಿ ಮುಖ್ಯ ರಸ್ತೆಯಿಂದ ಹಿತ್ಲುಗದ್ದೆ ಊರಿನೊಳಗೆ ಹೋಗುವ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಮೂಲಕ ಅವರು ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ವಿಶೇಷ ಯೋಜನೆ ಅಡಿಯಲ್ಲಿ ಮಂಜೂರಾದ ರೂ. ೩೯ ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ವಿವಿಧ ರಸ್ತೆ ದುರಸ್ತಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ಡಾಂಬರಿ ರಸ್ತೆ ದುರಸ್ತಿ ಕಾಮಗಾರಿ ಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು ನಿಡ್ತ ಗ್ರಾ.ಪಂ. ವ್ಯಾಪ್ತಿಯ ಹಾರೆಹೊಸೂರು ಗ್ರಾಮದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಸರಕಾರ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತಿರುವ ಜೊತೆಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮೀಣ ರಸ್ತೆ ಅಭಿವೃದ್ದಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಸೇರಿದಂತೆ ಉತ್ತಮ ಗುಣಮಟ್ಟದ ಗ್ರಾಮೀಣ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಚಂದ್ರಮೋಹನ್, ಪಿಡಿಓ ಹರೀಶ್, ಸದಸ್ಯ ಸತೀಶ್‌ಕುಮಾರ್, ದಮಯಂತಿ, ಯಮುನಾ ಸುರೇಶ್, ರಾಧಮಣಿ, ಪಿ.ಎನ್. ಗಂಗಾಧರ್, ಪ್ರಮುಖರಾದ ಕೋಮಾರಪ್ಪ, ಲೀಲಾ ದೇವದಾಸ್, ರಾಜಮ್ಮ ರುದ್ರಯ್ಯ, ಅಶೋಕ್, ಭರತ್, ಜೀವನ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಜೆ.ಎಲ್. ಜನಾರ್ದನ್ ಮುಂತಾದವರು ಇದ್ದರು.