ವೀರಾಜಪೇಟೆ, ಫೆ. ೧೩: ಪಟ್ಟಣದ ಚಿಕ್ಕಪೇಟೆ ಬಳಿ ಶಾಸಕರ ವಿಶೇಷ ಅನುದಾನ ರೂ. ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ, ಇಂದಿನ ದಿನದಲ್ಲಿ ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು. ಅದರಲ್ಲೂ ಶುದ್ಧ ನೀರು ಸಿಗುವುದು ದುಸ್ತರ ಎಂಬAತಾಗಿರುವ ಇಂದಿನ ದಿನಗಳಲ್ಲಿ ಶುದ್ಧ ನೀರಿನ ಘಟಕದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಹಿಂದೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಪುರಸಭೆ ಸದಸ್ಯರು ಶಾಸಕರಲ್ಲಿ ಶುದ್ಧ ನೀರಿನ ಘಟಕ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಅದಕ್ಕೆ ವಿಶೇಷ ಅನುದಾನ ಒದಗಿಸಿ ಇಂದು ನೀರಿನ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ದೇಚಮ್ಮ, ಸದಸ್ಯರಾದ ಎಸ್.ಹೆಚ್. ಮತೀನ್, ರಾಜೇಶ್ ಪದ್ಮನಾಭ, ಆಶಾ ಸುಬ್ಬಯ್ಯ, ರಜನಿಕಾಂತ್, ಜಲೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರುಗಳು, ಪುರಸಭೆ ನಾಮನಿರ್ದೆಶಿತ ಸದಸ್ಯರುಗಳಾದ ಮೋಹನ್, ದಿನೇಶ್ ನಂಬಿಯಾರ್, ಹಮೀದ್, ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.