ಮಡಿಕೇರಿ, ಫೆ. ೧೪: ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ಗೆ ಹಾನಿ ಮಾಡಿದ ಆರೋಪದಡಿ ನಂದಕುಮಾರ್ ಸೇರಿದಂತೆ ಇತರರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ನೀಡಿದ ದೂರಿನನ್ವಯ ಪೊಲೀಸರು ಇದು ಅಸಂಜ್ಞೆ ಪ್ರಕರಣವಾಗಿರುವ ಹಿನ್ನೆಲೆ ಕಲಂ ೩೨೪(೩) ಬಿಎನ್.ಎಸ್. ಅಡಿ ತನಿಖೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾ. ೧೦ ರಂದು ನಗರದ ಅಂಬೇಡ್ಕರ್ ಭವನ ಎದುರು ನಡೆದ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಂದರ್ಭ ಅಳವಡಿಸಿದ್ದ ಅಂಬೇಡ್ಕರ್ ಭಾವಚಿತ್ರವುಳ್ಳ ಫ್ಲೆಕ್ಸ್ ಅನ್ನು ಸುಟ್ಟು ಹಾಗೂ ಪ್ರತಿಭಟನೆ ಸಂದರ್ಭ ಗೇಟ್‌ಗೆ ಹಾಕಿದ್ದ ಬೀಗ ಒಡೆದು ಒಳನುಗ್ಗಿರುವುದು ಕಂಡುಬAದಿದೆ.