ಮಡಿಕೇರಿ, ಫೆ. ೧೪: ಮಾರ್ಚ್ ತಿಂಗಳಿನಲ್ಲಿ ಗೋವಾದಲ್ಲಿ ಜರುಗಲಿರುವ ಮಾಸ್ಟರ್ಸ್ ರಾಷ್ಟಿçÃಯ ಬ್ಯಾಡ್ಮಿಂಟನ್ ಟೂರ್ನಿಗೆ ಜಿಲ್ಲೆಯ ಮಾಳೆಯಂಡ ಅರುಣ್ ಪೂವಯ್ಯ, ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಮಾಚೆಟ್ಟಿರ ಲಾಲು ಅವರುಗಳು ಆಯ್ಕೆಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಟೂರ್ನಿಯಲ್ಲಿ ಕ್ರಮವಾಗಿ ಮೂರು ಮಂದಿ ೬೫, ೬೦ ಹಾಗೂ ೭೦ ಪ್ಲಸ್ ವಿಭಾಗಗಳಲ್ಲಿ ಭಾಗವಹಿಸಿ ಚಾಂಪಿಯನ್ ಗಳಾಗುವ ಮೂಲಕ ರಾಷ್ಟಿçÃಯ ಚಾಂಪಿಯನ್ ಶಿಪ್ ಗೆ ಆಯ್ಕೆಗೊಂಡಿದ್ದಾರೆ. ಈ ಟೂರ್ನಿ ಮಾರ್ಚ್ ೨೧ ರಿಂದ ೨೪ ರವರೆಗೆ ನಡೆಯಲಿದೆ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅರುಣ್ ಪೂವಯ್ಯ ಪರುಷರ ಸಿಂಗಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ನಲ್ಲಿ ಚಿನ್ನ, ಜ್ಯೋತಿ ಸೋಮುಯ್ಯ ಅವರು ಸಿಂಗಲ್ಸ್ನಲ್ಲಿ ಚಿನ್ನ, ಮತ್ತೆ ಡಬಲ್ಸ್ ಹಾಗೂ ಡಬಲ್ಸ್ನಲ್ಲಿ ಮತ್ತೆರಡು ಚಿನ್ನದ ಪದಕ ಪಡೆದಿದ್ದಾರೆ. ಲಾಲು ಅವರೂ ಪದಕದ ಸಾಧನೆ ಮಾಡಿದ್ದಾರೆ.