ಮಡಿಕೇರಿ, ಫೆ. ೧೪: ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಆತ್ಮಸ್ಥೆöÊರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ನಗರದ ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಕುಪ್ಪಂಡ ರಾಚಪ್ಪ ಕಿವಿಮಾತು ಹೇಳಿದರು.

ಸೇವಾಧಾಮ- ಸೇವಾ ಭಾರತಿ ಕೊಡಗು ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶÀ್ವಕಲ್ಯಾಣ ಸೇವಾ ಸಮಿತಿ ಅಶ್ವಿನಿ ಆಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ವಿಕಾಸ್ ಜನಸೇವಾ ಟ್ರಸ್ಟ್ ಮಡಿಕೇರಿ ಇವುಗಳ ಸಹಕಾರದೊಂದಿಗೆ ಅಶ್ವಿನಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿರುವ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆನ್ನುಹುರಿ ಅಪಘಾತಕ್ಕೊಳಗಾದವರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಯಾವುದೇ ಕಾರಣಕ್ಕೂ ಕುಗ್ಗದೆ ಯಾವುದಾದರೂ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಬೆಳವಣಿಗೆ ಸಾಧಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಮರೆಯ ಬಾರದೆಂದರು. ಸೇವಾಭಾರತಿಯ ಖಜಾಂಚಿ, ಸೇವಾಧಾಮದ ಸಂಸ್ಥಾಪಕರಾದ ಕೆ.ವಿನಾಯಕ್ ರಾವ್ ಮಾತನಾಡಿ, ಬೆನ್ನುಹುರಿಗೆ ಒಳಗಾದವರಿಗೆ ಬದುಕು ಕಲ್ಪಿಸಿಕೊಡ ಬೇಕೆಂಬುದು ನಮ್ಮ ಉದ್ದೇಶ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಬೆನ್ನುಹುರಿಗೆ ಒಳಗಾದವರು ವ್ಯಾಯಾಮ, ಧ್ಯಾನದ ಮೂಲಕ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸಿಕೊಂಡು ಮನೆಯವರಿಗೆ ಹೊರೆಯಾಗಲಾರೆ ಎಂಬ ಸಂಕಲ್ಪದೊAದಿಗೆ ಮುಂದುವರಿಯಬೇಕೆAದು ಸಲಹೆಯಿತ್ತರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಲಹಾ ಸಮಿತಿ ಸದಸ್ಯ ಅಜಯ್ ಸೂದ್ ಮಾತನಾಡಿ, ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ತಮ್ಮ ಬದುಕಿನ ಶೈಲಿಯನ್ನು ಬದಲಿಸಿಕೊಂಡು ಮನೆಯವರಿಗೆ ಹೊರೆಯಾಗದಂತೆ ಬದುಕಲು ಪ್ರಯತ್ನಿಸಬೇಕೆಂದರು.

ವಿಕಾಸ್ ಜನಸೇವಾ ಟ್ರಸ್ಟ್ನ ಸದಸ್ಯ ಕೋಚನ ಎಂ. ಚೇತನ್ ಮಾತನಾಡಿದರು. ಟ್ರಸ್ಟ್ನ ಗೌರವಾಧ್ಯಕ್ಷ ಕಾರ್ಯಪ್ಪ ಅತಿಥಿಯಾಗಿ ಉಪಸ್ಥಿತರಿದ್ದರು.

ಸೇವಾಭಾರತಿಯ ಚರಣ್ ನಿರೂಪಿಸಿದರು. ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಯ್ಯ ಸ್ವಾಗತಿಸಿದರು. ಸೇವಾಭಾರತಿಯ ಕುಸುಮಾಧರ ವಂದಿಸಿದರು.