ಕೊಡ್ಲಿಪೇಟೆ, ಫೆ. ೧೮: ಸಮೀಪದ ದೊಡ್ಡಕೊಡ್ಲಿ ಗ್ರಾಮದ ಮುಖ್ಯ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮಸ್ಥರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಡಿ.ಎನ್. ವಸಂತ್, ದೊಡ್ಡಕೊಡ್ಲಿ ಗ್ರಾಮದಲ್ಲಿರುವ ಎರಡು ದಲಿತ ಸಂಘಟನೆಗಳ ಉಸ್ತುವಾರಿಯಲ್ಲಿ ಗ್ರಾಮಸ್ಥರ ಸಹಕಾರದಿಂದ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಹೊರಗಿನಿಂದ ಯಾವುದೇ ವಂತಿಕೆ ಪಡೆಯದೆ ಪ್ರತಿ ಮನೆಯಿಂದ ಹಣ ಸಂಗ್ರಹಿಸಿ ಅಂದಾಜು ರೂ. ೩ ಲಕ್ಷ ರೂಪಾಯಿ ಮೊತ್ತದ ಪುತ್ಥಳಿಯನ್ನು ನಿರ್ಮಿಸಲಾಗುವುದು ಎಂದರು. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗಸೂಚಿಯಾಗಲಿ ಎಂಬ ಉದ್ದೇಶದಿಂದ ಸಮಾನತೆಯ ಹರಿಕಾರ, ನಮಗೆ ಬದುಕು ಕೊಟ್ಟಿರುವಂತಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭ ಸಂಘಟನೆಗಳ ಅಧ್ಯಕ್ಷರುಗಳಾದ ಜಗದೀಶ್ ಡಿ.ವಿ. ಮತ್ತು ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಪ್ರಮುಖರಾದ ಶಾಂತಕುಮಾರ್, ಕಾರ್ತಿಕ್, ಕೌಶಿಕ್‌ಕುಮಾರ್, ವಸಂತ್, ವೀರಭದ್ರ, ನಿಖಿಲ್, ಪುನಿತ್, ವಿನಯ್, ಯುವರಾಜ್, ಗಣೇಶ್, ದರ್ಶನ್ ಮುಂತಾದವರಿದ್ದರು.