ಕಣಿವೆ, ಫೆ. ೧೮: ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದ ಎನ್‌ಸಿಸಿ ಕೆಡೆಟ್ ಕ್ಯಾಪ್ಟನ್ ಹೆಚ್.ಎಸ್. ಕಿಶನ್ ಎನ್‌ಸಿಸಿಯಲ್ಲಿ ತೋರಿರುವ ವಿಶೇಷ ಸಾಧನೆಗಳಿಗಾಗಿ ಮುಖ್ಯ ಮಂತ್ರಿಗಳ ಪ್ರಶಂಸ ಪದಕ ದೊರೆತಿದೆ. ಮೈಸೂರಿನ ವಿದ್ಯಾವರ್ಧಕ ಇಂಜಿನಿಯ ರಿಂಗ್ ಕಾಲೇಜಿನಲ್ಲಿ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ ಬಿಇ ವಿದ್ಯಾರ್ಥಿ ಯಾಗಿರುವ ಕೆಡೆಟ್ ಕ್ಯಾಪ್ಟನ್ ಕಿಶನ್ ಹೆಚ್.ಎಸ್. ರಾಷ್ಟಿçÃಯ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಮುಖ್ಯಮಂತ್ರಿಗಳ ಪ್ರಶಂಸೆ ದೊರೆತಿದೆ.

ಈ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಖ್ಯಮಂತ್ರಿಗಳ ಪರವಾಗಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರದಾನ ಮಾಡಿದರು. ಕೆಡೆಟ್ ಕ್ಯಾಪ್ಟನ್ ಕಿಶನ್ ಅವರ ಎನ್‌ಸಿಸಿ ಪ್ರಯಾಣವು ಹಲವಾರು ಪ್ರತಿಷ್ಠಿತ ಸಾಧನೆಗಳಿಂದ ಗುರುತಿಸಲ್ಪಟ್ಟಿದೆ.

೨೦೨೩ ರಲ್ಲಿ ಉಡುಪಿಯ ಅರೇಬಿಯನ್ ಸಮುದ್ರದಲ್ಲಿ ಸಾಗರ ನೌಕಾಯಾನ ದಂಡಯಾತ್ರೆಯಲ್ಲಿ ಭಾಗವಹಿಸಿ ೨೪೦ ಕಿಮೀ (Whಚಿಟeಡಿ) ವೇಲರ್ ನೌಕಾಯಾನವನ್ನು ಯಶಸ್ವಿಯಾಗಿ ಕ್ರಮಿಸಿದ್ದರು. ಕರಾವಳಿ ಯುದ್ದಕ್ಕೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

೨೦೨೪ ರಲ್ಲಿ ಆಲ್ ಇಂಡಿಯಾ ನೌಕಾ ಸೈನಿಕ್ ಕ್ಯಾಂಪ್(IಓS ಶಿವಾಜಿ, ಲೋನಾವಾಲ)ನಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ವನ್ನು ಪ್ರತಿನಿಧಿಸಿದ್ದರು. ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ನಡೆದ ಪ್ರಧಾನಮಂತ್ರಿಗಳ ರ‍್ಯಾಲಿಯಲ್ಲಿ ವಿಶೇಷ ನೌಕಾಯಾನ ದಂಡಯಾತ್ರೆಯ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಮತ್ತು ಗೋವಾದ ಏಕೈಕ ಹಿರಿಯ ವಿಭಾಗದ (Sಆ) ಕೆಡೆಟ್ ಆಗಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಸಾಧಕ ವಿದ್ಯಾರ್ಥಿ ಹೆಚ್.ಎಸ್. ಕಿಶನ್ ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಪಂ ಸದಸ್ಯರೂ ಆಗಿರುವ ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕ ಹೆಚ್.ಎನ್. ಶಿವನಂಜಪ್ಪ (ಮಹೇಶ್) ಹಾಗೂ ಸರಿತಾ ದಂಪತಿಯ ಪುತ್ರ.