*ಗೋಣಿಕೊಪ್ಪ, ಫೆ. ೧೮: ಜ್ಞಾನಗಂಗಾ ರೆಸಿಡೆನ್ಸಿಯಲ್ ಕುಶಾಲನಗರ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರಾಜೆಕ್ಟರ್ ಮಾದರಿ ತಯಾರಿಯಲ್ಲಿ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಎ.ಎಸ್. ಪ್ರಶೋಬ್ ಮತ್ತು ಬಿ.ಎಸ್. ತನಿಷ್ಕ ಪ್ರಸ್ತುತಪಡಿಸಿದ ಸ್ವಯಂ ಚಾಲಿತ ವಾಹನಗಳ ನ್ಯಾವಿಗೇಷನ್ ಮತ್ತು ಸ್ಮಾರ್ಟ್ ಸಾರಿಗೆ ವ್ಯವಸ್ಥೆಗಳಲ್ಲಿ ಉಪಯೋಗಕಾರಿಯಾಗಿ ಲೇನ್ ಫಾಲೋವಿಂಗ್ ರೋಬೋಟ್ ಮಾದರಿಗೆ ದ್ವಿತೀಯ ಸ್ಥಾನ ದೊರೆಯಿತು.

ಪ್ರೌಢಶಾಲಾ ವಿಭಾಗದಲ್ಲಿ ಬಿ.ಎ. ಅದಿಲ್ ಮತ್ತು ಎಂ.ಸಿ. ಮೋಕ್ಷಿತ್ ಪ್ರದರ್ಶಿಸಿದ ‘ಮಳೆಯಿಂದ ಕಾಫಿ ಬೀಜ ಸ್ವಯಂಚಾಲಿತವಾಗಿ ರಕ್ಷಿಸುವ ಆಟೋಮೆಟಿಕ್ ಕಾಫಿ ಕ್ಯಾನೋಪಿ’ ಸರಳ ಮಾದರಿ ಗಮನ ಸೆಳೆಯಿತು.