ಮಡಿಕೇರಿ, ಫೆ. ೧೮: ಭಾಗ್ಯಲಕ್ಷಿö್ಮ ಯೋಜನೆಯಡಿ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಕಣೆಗಾಗಿ ೨೦೦೬-೦೭ ರಲ್ಲಿ ರಾಜ್ಯದಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಗೆ ೨೦೦೬-೦೭ ರಲ್ಲಿ ಜಿಲ್ಲೆಯ ೧೩೫೫ ಫಲಾನುಭವಿಗಳು ನೋಂದಾಯಿಸಿ ಬಾಂಡ್ ಪಡೆದಿದ್ದಾರೆ.

ಈ ಸಾಲಿನಲ್ಲಿ ಬಾಂಡ್ ಪಡೆದಿರುವ ೧೮ ವರ್ಷ ಪೂರ್ಣಗೊಂಡ ಫಲಾನುಭವಿಗಳು ತಮ್ಮ ಪೋಷಕರೊಂದಿಗೆ ದಾಖಲಾತಿ ಹಾಗೂ ಫಲಾನುಭವಿಯ ಆಧಾರ್ ಕಾರ್ಡ್ ಜೋಡಣೆಯಾಗಿರುವ ಸಂಖ್ಯೆಯ ಮೊಬೈಲ್ ನೊಂದಿಗೆ ತಮ್ಮ ವ್ಯಾಪ್ತಿಗೆ ಬರುವ ಸಿಡಿಪಿಒ ಕಚೇರಿಗೆ ಖುದ್ದಾಗಿ ಅವಶ್ಯವಿರುವ ನಮೂನೆಗಳಿಗೆ ಸಹಿ ಮಾಡಿ ಮೊತ್ತ ಪಡೆದುಕೊಳ್ಳುವಂತೆ ಕೋರಿದೆ.

ಎಲ್‌ಐಸಿ ಸಂಸ್ಥೆಯಿAದ ನೀಡಲಾದ ಭರ್ತಿ ಮಾಡಿದ ನಮೂನೆ, ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ಸಂಖ್ಯೆ, ಐಎಪ್‌ಎಸ್‌ಸಿ ಕೋಡ್ ಮತ್ತು ಆಧಾರ್ ಸಂಖ್ಯೆ ಅವಶ್ಯಕತೆ ಮೂಲ (೦ ಬ್ಯಾಲನ್ಸ್ ಇದ್ದಲ್ಲಿ ಅದನ್ನು ತೆಗೆಸಬೇಕು) ಭಾಗ್ಯಲಕ್ಷ್ಮಿ ಮೂಲ ಬಾಂಡ್ ಲಗತ್ತಿಸಬೇಕು, ಮಗುವಿನ ಜನನ ಪ್ರಮಾಣ ಪತ್ರ ಲಗತ್ತಿಸಬೇಕು, ತಂದೆ-ತಾಯಿ, ಪೋಷಕರ, ಮಗುವಿನ ಹೆಸರು ಬದಲಾವಣೆಯಾಗಿದ್ದಲ್ಲಿ ಸಿಡಿಪಿಒ ಅವರಿಂದ ದೃಢೀಕರಣ ಪ್ರತಿ, ಶಾಲೆಯಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ ಲಗತ್ತಿಸಸಬೇಕು. (ಕನಿಷ್ಟ ೮ನೇ ತರಗತಿ) ಮೂಲ ಬಾಂಡ್ ಕಳೆದು ಹೋಗಿದ್ದಲ್ಲಿ ಜೆರಾಕ್ಸ್ ಪ್ರತಿಯೊಂದಿಗೆ ಎಫ್‌ಐಆರ್ ಪತ್ರಿಯನ್ನು ಲಗತ್ತಿಸಬೇಕು.

ಬಾಂಡ್‌ಗಳು ಇಲ್ಲದಿದ್ದಲ್ಲಿ ಆನ್‌ಲೈನ್‌ನಲ್ಲಿ ಇರುವ ಪ್ರತಿಗೆ ಸಿಡಿಪಿಒ ಅವರು ದೃಢೀಕರಿಸಿ ಲಗತ್ತಿಸಬೇಕು. ದತ್ತು ಮಕ್ಕಳು ಇದ್ದಲ್ಲಿ ಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ಭಾಗ್ಯಲಕ್ಷಿö್ಮ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯಾಗಿ ಹತ್ತಿರದ ಅಂಗನವಾಡಿ ಕೇಂದ್ರ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಚೇರಿ ಸಂಪರ್ಕಿಸಲು ಕೋರಿದೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಡಿಕೇರಿ ತಾಲೂಕು ದೂರವಾಣಿ ಸಂಖ್ಯೆ : ೦೮೨೭೨-೨೯೫೦೮೭, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಸೋಮವಾರಪೇಟೆ ತಾಲೂಕು ದೂರವಾಣಿ ಸಂಖ್ಯೆ : ೦೮೨೭೬-೨೦೦೨೩, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಪೊನ್ನಂಪೇಟೆ ತಾಲೂಕು ದೂರವಾಣಿ ಸಂಖ್ಯೆ : ೦೮೨೭೪೦೨೦೧೮೭೮. ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು ತಿಳಿಸಿದ್ದಾರೆ.