ಸುಂಟಿಕೊಪ್ಪ, ಫೆ. ೧೮: ವಾಹನ ಮಾಲೀಕರು ಹಾಗೂ ಚಾಲಕರು ಎಲ್ಲಾ ದಾಖಲಾತಿಗಳೊಂದಿಗೆ ಜಾಗೃತೆ ಯಿಂದ ವಾಹನ ಚಾಲನೆ ಮಾಡುವಂತೆ ಮಡಿಕೇರಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ಕರೆ ನೀಡಿದರು.
ಸುಂಟಿಕೊಪ್ಪ ವಾಹನ ನಿಲ್ದಾಣ ದಲ್ಲಿ ೩೬ನೇ ರಾಷ್ಟಿçÃಯ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಉದ್ಘಾಟಿಸಿ ವಾಹನ ಚಾಲಕರನ್ನು ಹಾಗೂ ಸಾರ್ವಜನಿಕ ರನ್ನುದ್ದೇಶಿಸಿ ಮಾತನಾಡಿ, ಸೇಫ್ಟಿ ಬೆಲ್ಟ್, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ವಾಹನ ಚಾಲನಾ ಪರವಾನಗಿಯನ್ನು ಹೊಂದದೆ ವಾಹನ ಚಾಲನೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ವಾಹನಕ್ಕೆ ಸಂಬAಧಿಸಿದÀ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿ ಕೊಳ್ಳಬೇಕು. ಮೋಜಿಗಾಗಿ ವಾಹನ ಚಾಲನೆ ಮಾಡಿ ಜೀವಕ್ಕೆ ಕುತ್ತುತರದಂತೆ ಜಾಗೃತೆ ವಹಿಸಬೇಕೆಂದರು. ಮೊದಲಿಗೆ ಕುಶಾಲನಗರದ ವಿದ್ಯಾಸಾಗರ ಕಲಾವೇದಿಕೆಯರಾಜು ಹಾಗೂ ತಂಡದವರಿAದ ಬೀದಿನಾಟಕ ಮಾಡಿ ಸಂಚಾರ ನಿಯಮಗಳನ್ನು ನಟನೆ ಮಾಡಿ ನಟಿಸುವ ಮೂಲಕ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಮಡಿಕೇರಿ ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಹಾಗೂ ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಗಳು, ವಾಹನ ತರಬೇತು ದಾರರು, ಆ ವಾಹನ ಚಾಲಕರು ಹಾಗೂ ಸಾರ್ವಜನಿಕರು ಹಾಜರಿದ್ದರು.