*ಗೋಣಿಕೊಪ್ಪ, ಫೆ. ೧೮: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೯.೬೭ ಲಕ್ಷ ವೆಚ್ಚದ ಕಿರು ಸೇತುವೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಕಾರ್ಮಾಡು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ಚಿಣ್ಣನ ಹಾಡಿಯ ನಿವಾಸಿಗಳ ಅನುಕೂಲಕ್ಕೆ ಸೇತುವೆ ಕಾಮಗಾರಿಗೆ ಚಾಲನೆ ದೊರೆಯಿತು. ಹಾಡಿಯ ಜನರು ಕಾಲ್ನಡಿಗೆ ಸೇತುವೆ ಬಳಕೆಯನ್ನು ಹೊಂದಿದ್ದರು. ಕಳೆದ ಆಗಸ್ಟ್ ತಿಂಗಳ ಮಳೆಗೆ ಈ ಮರದ ತುಂಡು ಮುಳುಗಿ ಸಂಪರ್ಕವನ್ನು ಕಳೆದುಕೊಂಡರು.

ಹಾಡಿ ನಿವಾಸಿಗಳು ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಡವನ್ನು ಜಿಲ್ಲಾಡಳಿತದ ಮೇಲೆ ಹೇರಿದ ಪರಿಣಾಮ ಸೇತುವೆ ನಿರ್ಮಾಣಕ್ಕೆ ಅನೂಕುಲ ದೊರೆತಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮ್ಮಣಿ, ಉಪಾಧ್ಯಕ್ಷ ಚಕ್ಕೆರ ಅಯ್ಯಪ್ಪ, ಸದಸ್ಯರುಗಳಾದ ಕಾಟಿಮಾಡ ಶರಿನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಪ್ರಮುಖರುಗಳಾದ ಪೊರಂಗಡ ಪವನ್ ಚಿಟ್ಯಪ್ಪ, ತೀತಿರ ಚೋಂದಮ್ಮ, ಮೇಚಂಡ ವಿಭಿನ್ ಗಾಂಧಿ, ಮಾರ, ಮುತ್ತ, ಪೊನ್ನ, ವಿಜಯ ಇದ್ದರು.