ಮಡಿಕೇರಿ, ಫೆ. ೧೮: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಮತ್ತು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಸಹಕಾರದಲ್ಲಿ ೬೫ನೇ ರಾಷ್ಟಿçÃಯ ನೃತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೃತ್ಯೋತ್ಸವಕ್ಕೆ ಚಾಲನೆಯನ್ನು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವರಾಜು ಪಿ.ಎಲ್. ನೆರವೇರಿಸಿ, ಭಾರತೀಯ ಸಂಸ್ಕೃತಿಯಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ಶಾಸ್ತಿçÃಯ ನೃತ್ಯೋತ್ಸವವನ್ನು ಶ್ರೀ ಓಂಕಾರೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ನೃತ್ಯ ಗುರುಗಳಾದ ತೃಷ್ಣ ವಿ. ಕುಮಾರ್, ನೀಲಪು ಲೀಲಾ ಕೃಷ್ಣರೆಡ್ಡಿ, ಶ್ರೀಕಾಕುಲಂ, ಮಾ ಮಹೇಶ್ವರಿ ಕೆ, ನಳಿನಿ ಎಂ. ಆಯೋಜನಾ ಕಾರ್ಯದರ್ಶಿ ವಿದುಷಿ ಡಾ. ಸ್ವಾತಿ ಪಿ. ಭಾರದ್ವಾಜ್ ಭಾಗವಹಿಸಿದ್ದರು. ನೃತ್ಯೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶ್ರೀ ಓಂಕಾರೇಶ್ವರ ರಾಷ್ಟಿçÃಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.