ಕೂಡಿಗೆ, ಫೆ. ೧೮: ಹಾರಂಗಿ ಯೋಜನಾ ನೀರು ಬಳಕೆದಾರರ ಸಭೆ ಯೋಜನಾ ಮಹಾಮಂಡಲದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಮಹಾಮಂಡಲದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಯ ನೀರು ಬಳಕೆದಾರರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರ ಸಮ್ಮುಖದಲ್ಲಿ ನೀರು ಬಳಕೆದಾರರ ಸಂಘಗಳ ಬೆಳವಣಿಗೆಗೆ ಮತ್ತು ಬಳಕೆದಾರರು ವ್ಯಾಪ್ತಿಯ ನೀರಿನ ಕರವಸೂಲಿ ಬಗ್ಗೆ ಸೇರಿದಂತೆ ಸಂಘಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸಮಗ್ರವಾದ ಚರ್ಚೆಗಳು ನಡೆದವು. ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ, ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಯೋಜನಾ ನೀರು ಬಳಕೆದಾರರ ಮಹಾಮಂಡಲದ ನಿರ್ದೇಶಕರಾದ ಹೆಚ್.ಟಿ. ದಿನೇಶ್, ಹೆಚ್.ಆರ್. ಕೇಶವನಾಥ್, ಶಿವಣ್ಣ, ಟಿ. ಲೋಕೇಶ್, ಮಹಾಮಂಡಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸೇರಿದಂತೆ ಮೂರು ಜಿಲ್ಲೆಗಳ ನೀರು ಬಳಕೆದಾರರ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳು ಹಾಜರಿದ್ದರು.