ಮಡಿಕೇರಿ, ಫೆ. ೧೯: ಮಡಿಕೇರಿ ನಗರಸಭೆಯ ಅಧಿಕಾರಿ ಎಂ.ಸಿ. ಶೈಲಾ(೫೦) ಅವರು ತಾ.೧೯ ರಂದು ಮೈಸೂರಿನಲ್ಲಿ ನಿಧನರಾದರು. ನಗರಸಭೆಯ ಸಮುದಾಯ ಸಂಘಟನಾಧಿಕಾರಿಯಾಗಿದ್ದ ಶೈಲಾ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೀರಾಜಪೇಟೆ ಪುರಸಭೆ, ನಾಗಮಂಗಲ ಪುರಸಭೆಯಲ್ಲಿಯೂ ಕಾರ್ಯನಿರ್ವಹಣೆ ಮಾಡಿದ್ದ ಇವರು ಜಿಲ್ಲಾಧಿಕಾರಿ ಕಛೇರಿಯ ಡಿಯುಡಿಸಿ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದರು. ಕೊಡಗು ಫ್ರಂಟ್ ಆಂಗ್ಲ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕೂಡ ಶೈಲಾ ಅವರು ಸೇವೆ ಸಲ್ಲಿಸಿದ್ದು, ಅವರ ನಿಧನಕ್ಕೆ ಶಕ್ತಿ ಬಳಗ ವಿಷಾಧಿಸುತ್ತದೆ.

ಇವರು ಪತಿ ಕಾಫಿ ಬೆಳೆಗಾರ ಪಾಡಿಚೆಟ್ಟೀರ ಮೋಹನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೨೦ ರಂದು (ಇಂದು) ಮುತ್ತಾರ್ಮುಡಿಯಲ್ಲಿ ನಡೆಯಲಿದೆ.