ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ೯ನೇ ಆವೃತ್ತಿ ಪಾಕಿಸ್ತಾನ ಮತ್ತು ಸಂಯುಕ್ತ ಅರಬ್ ರಾಷ್ಟçದ (ಯು.ಎ.ಇ.) ದುಬೈನಲ್ಲಿ ನಡೆಯಲಿವೆ. ಫೆಬ್ರವರಿ ೧೯ ರಿಂದ ಮಾರ್ಚ್ ೯ ರವರೆಗೆ ನಡೆಯುವ ಈ ಪಂದ್ಯಾವಳಿಯಲ್ಲಿ ವಿಶ್ವದ ಪ್ರಮುಖ ೮ ತಂಡಗಳು ಟ್ರೋಫಿಗಾಗಿ ಸೆಣಸಲಿವೆ.

ಟಿ-೨೦ ವಿಶ್ವ ಚಾಂಪಿಯನ್ ಟೀಂ ಇಂಡಿಯಾ, ನಿಗದಿತ ೫೦ ಓವರ್‌ಗಳ ವಿಶ್ವ ಚಾಂಪಿಯನ್ ಆಸ್ಟೆçÃಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆAಡ್, ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡಗಳು, ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಆಡಲಿವೆ.

೧೯೯೮ ರಿಂದ ಆರಂಭವಾಗಿ ಇದುವರೆಗೆ ನಡೆದಿರುವ ಐ.ಸಿ.ಸಿ. ಚಾಂಪಿಯನ್ ಟ್ರೋಫಿ ಪಂದ್ಯಾವಳಿಯ ೮ ಆವೃತ್ತಿಗಳಲ್ಲಿ, ಟೀಂ ಇಂಡಿಯಾ ಮತ್ತು ಆಸ್ಟೆçÃಲಿಯಾ ತಲಾ ೨ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡಗಳು ತಲಾ ಒಮ್ಮೆ ಚಾಂಪಿಯನ್ಸ್ ಟ್ರೋಫಿ ದಕ್ಕಿಸಿಕೊಂಡಿವೆ. ೨೦೦೨ ರಲ್ಲಿ ಈ ಪಂದ್ಯಾವಳಿ ಶ್ರೀಲಂಕಾದಲ್ಲಿ ನಡೆದಾಗ, ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ, ಟೀಂ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗಿತ್ತು.

೨೦೧೭ ರಲ್ಲಿ ಇಂಗ್ಲೆAಡ್ ಮತ್ತು ವೇಲ್ಸ್ನಲ್ಲಿ ಈ ಪಂದ್ಯಾವಳಿ ಕೊನೆಯದಾಗಿ ನಡೆದಿತ್ತು. ನಂತರ, ಟಿ-೨೦ ಕ್ರಿಕೆಟ್ ಅಬ್ಬರದಿಂದಾಗಿ, ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಸ್ಥಗಿತಗೊಂಡಿತ್ತು. ಇದನ್ನು ಮುಂದುವರಿಸಲು ನಿರ್ಧರಿಸಿದ ಅಂರ‍್ರಾಷ್ಟಿçÃಯ ಕ್ರಿಕೆಟ್ ಮಂಡಳಿ (ಐ.ಸಿ.ಸಿ.) ಪಂದ್ಯಾವಳಿಯನ್ನು ೨೦೨೫ ರಲ್ಲಿ ಪಾಕಿಸ್ತಾನದಲ್ಲಿ ಮತ್ತು ೨೦೨೯ ರಲ್ಲಿ ಭಾರತದಲ್ಲಿ ಆಯೋಜಿಸಲು ನಿರ್ಧರಿಸಿತ್ತು.

ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದೆ ಎಂಬ ಕಾರಣದಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬAಧ ಹದಗೆಟ್ಟಿರುವುದರಿಂದ ಮತ್ತು ತಂಡದ ಸುರಕ್ಷತೆಯ ದೃಷ್ಟಿಯಿಂದ ಪಾಕಿಸ್ತಾನದಲ್ಲಿ ಆಟವಾಡಲು ಟೀಂ ಇಂಡಿಯಾ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಟೀಂ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ದುಬೈ ಕ್ರೀಡಾಂಗಣ ವೇಗಿಗಳಿಗಿಂತಲೂ ಸ್ಪಿನ್ನರ್‌ಗಳಿಗೆ ನೆರವಾಗುವುದರಿಂದ, ೧೫ ಆಟಗಾರರ ಭಾರತದ ತಂಡದಲ್ಲಿ ಐವರು ಸ್ಪಿನ್ನರ್‌ಗಳಿದ್ದಾರೆ. ಟೀಂ ಇಂಡಿಯಾ ಕೇವಲ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಬಲಿಷ್ಠ ತಂಡಗಳನ್ನು ಒಳಗೊಂಡಿರುವ ‘ಎ’ ಗುಂಪು ‘ಗ್ರೂಪ್ ಆಫ್ ಡೆತ್’ ಎಂದೇ ಪರಿಗಣಿತವಾಗಿದೆ. ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಫೆಬ್ರವರಿ ೨೦ ರಂದು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಫೆಬ್ರವರಿ ೨೩ ರಂದು ಕುತೂಹಲಕಾರಿ ಭಾರತ - ಪಾಕಿಸ್ತಾನ ಪಂದ್ಯ. ಮಾರ್ಚ್ ೨ ರಂದು ಟೀಂ ಇಂಡಿಯಾ - ನ್ಯೂಜಿಲೆಂಡ್ ನಡುವಿನ ಪಂದ್ಯ.

ಅಡೆತಡೆಗಳಿಲ್ಲದೆ ಸೆಮಿಫೈನಲ್ ತಲುಪಲು ಈ ಎಲ್ಲ ೩ ಪಂದ್ಯಗಳನ್ನೂ ಭಾರತ ಗೆಲ್ಲಬೇಕಿದೆ.

ಇವುಗಳಲ್ಲಿನ ಒಂದು ಸೋಲು ಕೂಡ ಟೀಂ ಇಂಡಿಯಾಗೆ ಅಪಾಯವೊಡ್ಡುವ ಸಾಧ್ಯತೆ ಇದೆ. ಆಗ ಭಾರತ ತಂಡದ ಸೆಮಿಫೈನಲ್ ಪ್ರವೇಶ, ಇತರ ತಂಡಗಳ ಸೋಲು-ಗೆಲುವಿನ ಸಮೀಕರಣವನ್ನು ಅವಲಂಬಿಸುವAತೆ ಮಾಡುತ್ತದೆ.

ಆಸ್ಟೆçÃಲಿಯಾ, ಇಂಗ್ಲೆAಡ್, ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ಥಾನ ತಂಡಗಳು ‘ಬಿ’ ಗುಂಪಿನಲ್ಲಿ ಸೆಣಸಲಿವೆ.

ಒಟ್ಟು ೧೫ ಪಂದ್ಯಗಳ ಈ ಪಂದ್ಯಾವಳಿಯಲ್ಲಿ ಉಭಯ ಗುಂಪುಗಳಲ್ಲಿ ಅಗ್ರಸ್ಥಾನ ಗಳಿಸುವ ತಲಾ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಟೀಂ ಇಂಡಿಯಾ ಸೆಮಿಫೈನಲ್ ಮತ್ತು ಫೈನಲ್ ಪ್ರವೇಶಿಸಿದರೆ, ಆ ಪಂದ್ಯಗಳೂ ದುಬೈನಲ್ಲೇ ನಡೆಯಲಿವೆ.

ಟೀಂ ಇಂಡಿಯಾಗೆ ವೇಗಿ ಜಸ್ಪೀತ್ ಬುಮ್ರಾ ಅನುಪಸ್ಥಿತಿ ಕಾಡಲಿದೆ. ಆಸ್ಟೆçÃಲಿಯಾ ಕೂಡ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಿಲ್‌ವುಡ್, ಮಿಚೆಲ್ ಮಾರ್ಶ್, ಮಾರ್ಕಸ್ ಸೋಯಿನಿಸ್ ಅವರಂತಹ ಪ್ರಮುಖ ಆಟಗಾರರಿಲ್ಲದೆ ಕಣಕ್ಕೆ ಇಳಿಯಲಿದೆ.

ಟೀಂ ಇಂಡಿಯಾದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿದರೆ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರಿಶಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ ಟೀಂ ಇಂಡಿಯಾದ ಇತರ ಸದಸ್ಯರು.

ಉತ್ತಮ ಪ್ರದರ್ಶನ ದೊಂದಿಗೆ, ಟೀಂ ಇಂಡಿಯಾ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಮುಕುಟ ಮಡಿಗೇರಿಸಲಿ.

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ. ಮೊ. ೯೮೪೫೯೯೧೧೨.