ಮಡಿಕೇರಿ, ಫೆ. ೧೯ : ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಜಿಎಸ್‌ಟಿ ಕೌನ್ಸಿಲ್‌ನ ಮೈಸೂರು ಶಾಖೆಯಿಂದ ಕೊಡಗಿನ ಕೆಲವು ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಕಟ್ಟಿಲ್ಲವೆಂದು ನೋಟೀಸ್ ಜಾರಿ ಮಾಡಿ ಜಿಎಸ್‌ಟಿಯೊಂದಿಗೆ ದಂಡವನ್ನೂ ಕಟ್ಟಬೇಕೆಂದು ಸೂಚಿಸಲಾಗಿತ್ತು. ಈ ವಿಚಾರವಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂರ‍್ಸ್ ಅಸೋಸಿಯೇಷನ್, ಕೂರ್ಗ್ ಪ್ಲಾಂರ‍್ಸ್ ಅಸೋಸಿಯೇಷನ್ ವತಿಯಿಂದ ಸಂಸದ ಯದುವೀರ್ ಅವರನ್ನು ಭೇಟಿ ಮಾಡಿ ಪ್ಲಾಂಟೇಷನ್ ಬೆಳೆಗಳು ಮತ್ತು ಸಂಬಾರ ಪದಾರ್ಥಗಳನ್ನು ರೈತರು ಬೆಳೆದು ಮೂಲ ರೂಪದಲ್ಲಿ ಮಾರಾಟ ಮಾಡಿದರೆ ಅದು ಕಂದಾಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಕೂಡ ಜಿಎಸ್‌ಟಿ ಪಟ್ಟಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲದ್ದರಿಂದ ಜಿಎಸ್‌ಟಿ ಕೌನ್ಸಿಲ್ ನೋಟೀಸ್ ನೀಡಿದ್ದು, ಈ ಸಂಬAಧ ಕೇಂದ್ರ ಹಣಕಾಸು ಸಚಿವರ ಗಮನ ಸೆಳೆದು ಕರಿಮೆಣಸು ಬೆಳೆಗಾರರು ಜಿಎಸ್‌ಟಿಗೆ ಒಳಪಡದಂತೆ ಆದೇಶ ಹೊರಡಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ಸಂಸದರ ಪ್ರಯತ್ನದ ಫಲವಾಗಿ ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಆದೇಶ ಹೊರಬಿದ್ದಿದೆ.