ಮಡಿಕೇರಿ, ಫೆ. ೧೮: ಮಡಿಕೇರಿಯ ತನಲ್ ಎಂಬ ನೆರಳಿನ ಮನೆಯು ಅನಾಥರು, ನಿರ್ಗತಿಕರು ಅಬಲೆಯರು, ಮಾನಸಿಕ ಅಸ್ವಸ್ಥರು ಪಾರ್ಶ್ವವಾಯು ಪೀಡಿತ, ಕ್ಯಾನ್ಸರ್‌ನಂತಹ ಕಾಯಿಲೆಯಲ್ಲಿ ಬಳಲುತ್ತಿರುವ ಬದುಕಿನಲ್ಲಿ ನೊಂದು ಬೆಂದವರಿಗೆ ಆಶ್ರಯವಾಗಿ ಅವರ ಬಾಳಿಗೆ ನೆರಳಾಗಿ ಪರಿಣಮಿಸಿದ್ದು ಇದೀಗ ವಿವಾಹ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.

ಕಳೆದ ಏಳು ತಿಂಗಳ ಹಿಂದೆ ಸ್ಥಳೀಯ ಪೊಲೀಸರ ಮುಖಾಂತರ ಯುವತಿಯೊಬ್ಬಳನ್ನು ತನಲ್ ಆಶ್ರಮಕ್ಕೆ ದಾಖಲಿಸಿಕೊಳ್ಳಲಾಗಿತ್ತು, ಹೆಸರು ಸುನಿತಾ. ಗೌರಿಬಿದನೂರು ಎಂಬ ಊರಿನವಳು, ತಂದೆ ತಾಯಿ ಇಲ್ಲದೆ ಅನಾಥಳಾಗಿದ್ದ ಈಕೆಯ ಒಂದು ಕಾಲು ಅಲ್ಪ ಅಂಗವೈಕಲ್ಯ ಹೊಂದಿದ್ದು ಚಿಕ್ಕವಳಾಗಿದ್ದಾಗಲೇ ಯಾರೋ ಬೆಂಗಳೂರಿನ ಆಶ್ರಮವೊಂದರಲ್ಲಿ ಸೇರಿಸಿದ್ದರು.

ಕೆಲ ವರ್ಷಗಳವರೆಗೆ ಅಲ್ಲೇ ಇದ್ದ ಸುನಿತಾ ಒಂದು ದಿನ ಆಶ್ರಮದಿಂದ ದಾರಿ ತಪ್ಪಿ ಬಸ್ಸಿನಲ್ಲಿ ಮಡಿಕೇರಿಗೆ ಬಂದು ತಲುಪಿದ್ದು ಈಕೆಯ ಪರಿಸ್ಥಿತಿಯನ್ನು ಅರಿತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ತನಲ್ ಆಶ್ರಮಕ್ಕೆ ಸೇರಿಸಿದರು.

ಕರಕುಶಲ ತರಬೇತಿ

ತನಲ್ ಆಶ್ರಮವು ಕರಕುಶಲ ವಸ್ತುಗಳ ತಯಾರಿಕೆ ತರಬೇತಿ ನೀಡುವ ಮೂಲಕ ಆಶ್ರಮವಾಸಿಗಳನ್ನು ದಾರಿ ತಪ್ಪಿ ಬಸ್ಸಿನಲ್ಲಿ ಮಡಿಕೇರಿಗೆ ಬಂದು ತಲುಪಿದ್ದು ಈಕೆಯ ಪರಿಸ್ಥಿತಿಯನ್ನು ಅರಿತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ತನಲ್ ಆಶ್ರಮಕ್ಕೆ ಸೇರಿಸಿದರು.

ಕರಕುಶಲ ತರಬೇತಿ

ತನಲ್ ಆಶ್ರಮವು ಕರಕುಶಲ ವಸ್ತುಗಳ ತಯಾರಿಕೆ ತರಬೇತಿ ನೀಡುವ ಮೂಲಕ ಆಶ್ರಮವಾಸಿಗಳನ್ನು ಸಕ್ರಿಯಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಇಪ್ಪತ್ತಾರು ವಯಸ್ಸಿನ ಸುನಿತಾ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವುದರಿAದ ಬಹಳ ಬೇಗನೆ ಬಟ್ಟೆ ಮ್ಯಾಟ್, ಹೂ ಗುಚ್ಚಗಳು ಹಾಗೂ ಕಾಗದಗಳ ಮೂಲಕ ಅಲಂಕಾರ ವಸ್ತುಗಳನ್ನು ತಯಾರಿಸಲು ಕಲಿತಳು. ಜೊತೆಗೆ ಟೈಲರಿಂಗ್ ಅಲ್ಪ ಸ್ವಲ್ಪ ಬರುತ್ತಿದ್ದು ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತಮ ಆಹಾರ, ಆರೈಕೆಯ ಮೂಲಕ ಸುನಿತಾಳಿಗೆ ‘ತನಲ್’ ಆಶ್ರಮ ಮಾತ್ರ ಆಗಿರಲಿಲ್ಲ. ಅದೊಂದು ಸ್ವಂತ ಮನೆಯಂತೆ ಅನುಭವ ಆಗಿತ್ತು,ಅಧ್ಯಕ್ಷ ಮೊಹಮ್ಮದ್ ಮಗಳ ರೀತಿ ಉಪಚರಿಸಿ ಧೈರ್ಯ ತುಂಬಿದ್ದರು

ಕಂಕಣ ಭಾಗ್ಯ

ಸಂಸ್ಥೆಯ ಪದಾಧಿಕಾರಿಗಳು ಸುನಿತಾ ಳಿಗೆ ಮದುವೆ ಮಾಡಲು ತೀರ್ಮಾನಿಸಿ ವರನನ್ನು ಹುಡುಕುತ್ತಿದ್ದರು. ಅದೇ ಸಮಯಕ್ಕೆ ಹುಣಸೂರಿನಲ್ಲಿರುವ ಕೃಷಿಕ ವೃತ್ತಿಯ ರವಿ ವಧು ಹುಡುಕುತ್ತಿದ್ದದನ್ನು ತಿಳಿದ ತನಲ್ ಪದಾಧಿಕಾರಿಗಳು ರವಿ ಕುಟುಂಬವನ್ನು ಬರ ಮಾಡಿಕೊಂಡರು. ಹುಣಸೂರಿನ ವಕೀಲರಾದ ಶಿವಕುಮಾರ ಅವರು ತಮ್ಮ ಪತ್ನಿ ಹಾಗೂ ತನ್ನ ತಮ್ಮ ರವಿಯೊಂದಿಗೆ ತನಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುನಿತಾಳನ್ನು ನೋಡಿದರು. ಅವರು ತಮ್ಮನಿಗೆ ಆಕೆಯನ್ನು ವಿವಾಹ ಮಾಡಿಕೊಡಿ ಎಂದು ಅಧ್ಯಕ್ಷ ಮೊಹಮ್ಮದ್ ಅವರನ್ನು ಕೇಳಿಕೊಂಡಾಗ ಸಂತೋಷದಿAದ ಒಪ್ಪಿಗೆ ನೀಡಿದರು.

ಮುಂದೆ ಸುನಿತಾಳಿಗೂ ವಿಷಯವನ್ನು

(ಮೊದಲ ಪುಟದಿಂದ) ತಿಳಿಸಿ ನಂತರ ತನಲ್ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಲಾಯಿತು. ಅದರ ಭಾಗವಾಗಿ ಹುಣಸೂರಿನ ವರನ ಮನೆಗೆ ಮೊಹಮ್ಮದ್, ಪತ್ನಿ ಮುಹೀನ ದಂಪತಿ ಹಾಗೂ ಕಾರ್ಯದರ್ಶಿ ಬಾಳೆಯಡ ದಿವ್ಯಾ ಸೇರಿದಂತೆ ಅಲ್ಲಿನ ಸೇವಾ ಸಿಬ್ಬಂದಿಗಳೊAದಿಗೆ ತೆರಳಿ ಮದುವೆ ಬಗ್ಗೆ ಮಾತನಾಡಿದ ನಂತರ ತಾಂಬೂಲವನ್ನು ಬದಲಾಯಿಸಿ ಫೆಬ್ರವರಿ ೨೩ಕ್ಕೆ ಮದುವೆ ಮಾಡಿಸಲು ತೀರ್ಮಾನಿಸಲಾಯಿತು.

ತನಲ್ ಮನೆಯಲ್ಲಿ ಮದುವೆ ಸಂಭ್ರಮ

ಆಶ್ರಮದಲ್ಲಿ ಜನುಮ ದಿನ ಸಂಭ್ರಮ, ಹಬ್ಬ ಹರಿದಿನಗಳು ಇತರ ಶುಭ ಕಾರ್ಯಗಳು ನಡೆಯುತ್ತಿದ್ದರೂ ಇದೇ ಮೊದಲ ಬಾರಿಗೆ ಅದು ಕೂಡ ಆಶ್ರಮ ವಾಸಿಯೊಬ್ಬರ ಮದುವೆ ನಡೆಯುತ್ತಿರುವುದು ವಿಶೇಷವಾಗಿದೆ.

ಸೇವಾ ಸಿಬ್ಬಂದಿಗಳ ಸೇವೆ

ಸುನಿತಾಳ ಮದುವೆಯ ಪೂರ್ವಭಾವಿ ತಯಾರಿ ಎಂಬAತೆ ತನಲ್ ನ ಸೇವಾ ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸುನಿತಾಳಿಗೆ ಮೂಗುತಿ ಚುಚ್ಚಿಸಿ ಕಾಲುಚೈನ್ ಮತ್ತು ಚಪ್ಪಲಿ, ಶೃಂಗಾರ ಸಾಧನಗಳನ್ನು ಕೊಡಿಸಿ ‘ನೀನು ಅನಾಥಳಲ್ಲ ನಿನ್ನೊಂದಿಗೆ ನಾವೆಲ್ಲರೂ ಇದ್ದೇವೆ’ ಎಂದು ಧೈರ್ಯವನ್ನು ತುಂಬಿದ್ದಾರೆ.

ತನಲ್ ಆಶ್ರಮದಲ್ಲೇ ನಡೆಯುವ ಸರಳ ಸಮಾರಂಭದಲ್ಲಿ ವಿವಾಹ ಕಾರ್ಯಕ್ಕೆ ತಯಾರಿ ನಡೆಸುತ್ತಿದ್ದು, ಕಾರ್ಯಕಾರಿ ಸಮಿತಿ ಹಾಗೂ ತನಲ್ ಆಶ್ರಮದ ಮಹಿಳಾ ಸದಸ್ಯರುಗಳು ಸಕಲ ಸಿದ್ಧತೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಬಯಸದೇ ಬಂದ ಭಾಗ್ಯ ಎಂಬAತೆ ಸುನಿತಾಳ ತಾಳಿ ಭಾಗ್ಯ ಒದಗಿಬಂದಿದೆ.