ಮಡಿಕೇರಿ, ಫೆ. ೨೦: ಕಂದಾಯ ಆಯುಕ್ತರು, ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ, ಬೆಂಗಳೂರು ರವರು ಕರ್ನಾಟಕ ರಾಜ್ಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ನಲ್ಲಿ ಕ್ಷೇತ್ರ ಪರಿಶೀಲನೆಗೆ ಬಾಕಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಅರ್ಜಿಗಳನ್ನು ಹಾಗೂ ಮುಂದೆ ಸ್ವೀಕೃತವಾಗುವ ಹೊಸ ಅರ್ಜಿಗಳನ್ನು ಒಳಗೊಂಡAತೆ ಎಜೆಎಸ್‌ಕೆ ದತ್ತಾಂಶ ಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ನಿಂದ ರಾಜಸ್ವ ನಿರೀಕ್ಷಕರವರ ಲಾಗಿನ್ಗೆ ವರ್ಗಾಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ರಾಜಸ್ವ ನಿರೀಕ್ಷಕರವರ ಲಾಗಿನ್ನಲ್ಲಿ ಸ್ವೀಕೃತವಾಗಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ "ಈIಇಐಆ ಗಿಇಖIಈIಅಂಖಿIಔಓ IS PಇಓಆIಓಉ" ಎಂದು ಷರಾ ನಮೂದಾ ಗಿದ್ದಲ್ಲಿ ರಾಜಸ್ವ ನಿರೀಕ್ಷಕರು ಕ್ಷೇತ್ರ ಪರಿಶೀಲನೆ ಮಾಡಬೇಕಾಗಿರುತ್ತದೆ. ಎಜೆಎಸ್‌ಕೆ ದತ್ತಾಂಶದಲ್ಲಿನ ಸದರಿ ಬದಲಾವಣೆಗಳನ್ನು ಸದ್ಭಳಕೆ ಮಾಡಿಕೊಂಡು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ವಿತರಿಸಿ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡಲು ತಿಳಿಸಿದ್ದಾರೆ. ಅದರಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಹಾಗೂ ಕಂದಾಯ ಪರಿವೀಕ್ಷಕರಿಗೆ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಜಾತಿ/ ಆದಾಯ ಪ್ರಮಾಣ ಪತ್ರ ವಿತರಿಸುವಲ್ಲಿ ಯಾವುದೇ ತೊಂದರೆಯಾಗದAತೆ ಸರ್ಕಾರದ ಆದೇಶದಂತೆ ಈಗಾಗಲೇ ಕ್ರಮವಹಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ ತ್ವರಿತವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆಯಿರುವ ವಿದ್ಯಾರ್ಥಿಗಳು/ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ ೦೮೨೭೨-೨೨೧೦೭೭ ನ್ನು ಸಂಪರ್ಕಿಸಬಹುದು.
ಆದ್ದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬAಧಿಸಿದAತೆ ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದು. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.