ವೀರಾಜಪೇಟೆ, ಫೆ. ೨೦: ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸುಂದರ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಪೋಷಕರು, ಶಿಕ್ಷಕರು ಮತ್ತು ಸರಕಾರದ ಮೇಲಿದೆ ಎಂದು ಮಡಿಕೇರಿ ಸಂತ ಜೋಸೆಫರ ಕಾಲೇಜು ಉಪನ್ಯಾಸಕಿ ಕೆ. ಜಯಲಕ್ಷಿö್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗ ರಾಜೇಂದ್ರ ಭವನದಲ್ಲಿ ‘ಹೊಂಬೆಳಕು ಕಿರಣ ೨೨೮ರ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ’ದಲ್ಲಿ ‘ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪೋಷಕ ಶಿಕ್ಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ. ಮಕ್ಕಳಿಗೆ ೫ ವರ್ಷದವರೆಗೆ ಲಾಲನೆ ಪಾಲನೆ ಮಾಡಿ ನಂತರ ಎಲ್ಲಾ ಸಂಸ್ಕಾರವನ್ನು ಪೋಷಕರೆ ಕಲಿಸಬೇಕು. ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣದ ಅಗತ್ಯವಿದೆ. ಮಕ್ಕಳು ಗುರು ಹಿರಿಯರಿಗೆ ಗೌರವ ನೀಡಬೇಕು. ಪುಸ್ತಕಗಳೇ ಪೂಜಾ ಸಾಮಗ್ರಿಗಳೆಂದು ಭಾವಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಕಲೆ ಮತ್ತು ಪ್ರತಿಭೆಯನ್ನು ಗುರುತಿಸಿ ಹೊರತರುವಷ್ಟು ಶಕ್ತರಾಗಿರಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ನಿಂದಿಸಬಾರದು. ಮಕ್ಕಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಯುವ ಜನಾಂಗ ದಾರಿ ತಪ್ಪದಂತೆ ದೇಶದ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಂದೂರು ಸರಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ರತಿಕುಮಾರಿ ಅವರು ಮಾತನಾಡಿ, ಇತ್ತೀಚೆಗೆ ತಂತ್ರಜ್ಞಾನ ಹೆಚ್ಚು ಮುಂದುವರಿದಿದೆ. ಕಂಪ್ಯೂಟರ್ ಯುಗದಲ್ಲಿ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಎಲ್ಲಾ ಮಕ್ಕಳ ಕೈಯಲ್ಲಿ ಹೆಚ್ಚು ಮೊಬೈಲ್‌ಗಳು ಕಂಡುಬರುತ್ತಿದೆ. ಮಕ್ಕಳು ಬದುಕಿಗೆ ಬೇಕಾಗಿರುವುದನ್ನು ಮಾತ್ರ ಪಡೆದುಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು.
ಅರಮೇರಿ ಕಳಂಚೇರಿ ಶ್ರೀ ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಎಲ್ಲಾ ಮಾನವ ಸಂಪನ್ಮೂಲಗಳು ಇದ್ದು ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಶಾಲೆ ಯಾವುದೇ ಆಗಲಿ ಕಲಿಯುವುದು ಮುಖ್ಯ, ಭವಿಷ್ಯವನ್ನು ರೂಪಿಸಿಕೊಳ್ಳಲು ಮಕ್ಕಳು ಛಲದಿಂದ ಕಲಿತು ಗುರಿ ಮುಟ್ಟುವಂತಾಗಬೇಕು ಎಂದರು. ಪ್ರತಿಯೊಬ್ಬರು ಸ್ವಚ್ಛತೆಯ ಬಗ್ಗೆ ಗಮನಹರಿಸುವಂತಾಗಬೇಕೆAದು ಸ್ವಾಮೀಜಿ ಹೇಳಿದರು. ವಿದ್ಯಾರ್ಥಿ ದೀಪ್ತಿ ಸ್ವಾಗತಿಸಿದರು, ಕೆ.ಬಿ. ಇಂಪನ ಹಾಗೂ ಯಶಸ್ವಿನಿ ನಿರೂಪಿಸಿದರೆ, ಸುಶ್ಮಿತ ಪ್ರಸಾದ್ ವಂದಿಸಿದರು.