ಮಡಿಕೇರಿ, ಮಾ. ೧೩ : ಕಾಟಕೇರಿಯ ಮರ್ಕರ ಗೋಲ್ಡ್ ಎಸ್ಟೇಟ್ನ ನೀರಿನ ಪೈಪ್ ಲೈನ್ ಒಳಗಡೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ತಕ್ಷಣ ಉರಗಪ್ರೇಮಿ ಪಿಯೂಸ್ ಪೆರೇರಾ ಅವರನ್ನು ಸಂಪರ್ಕಿಸಿದ ಕೂಡಲೇ ಅವರು ಆಗಮಿಸಿ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರ ಮಾಡಿದರು. ಮನೆ ಸನಿಹ ಹಾವುಗಳನ್ನು ಕಂಡಲ್ಲಿ ಪಿಯೂಸ್ ಪೆರೇರಾ ಅವರನ್ನು +೯೧ ೯೪೮೧೯೫೨೨೫೩ಗೆ ಸಂಪರ್ಕಿಸಬಹುದಾಗಿದೆ.