ಮಡಿಕೇರಿ, ಮಾ. ೧೨: ಕೊಡಗಿನ ಮಡಿಕೇರಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ, ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಎಸ್‌ಎನ್‌ಡಿಎಂಸಿ) ವರದಿಯ ಪ್ರಕಾರ ಭೂಕಂಪ ದಾಖಲಾಗಿದೆ. ಇಂದು ಬೆಳಿಗ್ಗೆ ಮದೆನಾಡು, ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮಗಳಲ್ಲಿ ಭೂಕಂಪವುAಟಾಗಿ ಈ ಗ್ರ‍್ರಾಮಗಳ ನಿವಾಸಿಗಳು ಕೆಲಕಾಲ ಭಯಭೀತರಾದರು. ಭೂಕಂಪ ಸಂಭವಿಸಿರುವ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ದೃಢಪಡಿಸಿದ್ದಾರೆ. ಆದರೆ, ತೀವ್ರತೆ ಕಡಿಮೆಯಿದ್ದುದರಿಂದ ಆತಂಕ ಪಡದಂತೆ ತಿಳಿಸಿದ್ದಾರೆ. ತಾ.೧೨ ರ ಬುಧವಾರದಂದು ವೈಜ್ಞಾನಿಕವಾಗಿ ದಾಖಲೆÀಗೊಂಡಿರುವ ಭೂಕಂಪದ ಕುರಿತು ಕೆಎಎಸ್‌ಎನ್‌ಡಿಎಂಸಿ ನೀಡಿರುವ ಅಧಿಕೃತ ಮಾಹಿತಿ ಈ ಕೆಳಗಿನಂತಿದೆ.
ಕೊಡಗು ಜಿಲ್ಲೆಯಲ್ಲಿ ೧.೬ ತೀವ್ರತೆಯ ಭೂಕಂಪವನ್ನು ಭೂಕಂಪ ಮಾಪನಾ “ನೆಟ್ವರ್ಕ್” ಈ ಕೆಳಗಿನ ನಿಯತಾಂಕಗಳೊAದಿಗೆ ದಾಖಲಿಸಿದೆ.
ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮವು ಭೂಕಂಪದ ಕೇಂದ್ರ ಸ್ಥಳವಾಗಿದ್ದು, ಈ ಗ್ರಾಮದ ೨.೪ ಕಿ.ಮೀ. ವಾಯುವ್ಯ ದಿಕ್ಕಿನಲ್ಲಿ ೧.೬ ತೀವ್ರತೆಯ ಭೂಕಂಪವು ಬೆಳಿಗ್ಗೆ ೧೦:೪೯:೦೫ ಗಂಟೆಗೆ ಸಂಭವಿಸಿದೆ.
ದಾಖಲಾದ ನಿರ್ದೇಶಾಂಕಗಳು ಹೀಗಿವೆ: ಅಕ್ಷಾಂಶದ ಉದ್ದವು ಉತ್ತರಕ್ಕೆ ೧೨.೪೦೭೪ ಹಾಗೂ ಪೂರ್ವಕ್ಕೆ ೭೫.೭೦೫೧ ಆಗಿದ್ದು ಆಳ ೦೫ ಕಿಮೀನಷ್ಟಿತ್ತು.
ಇದಲ್ಲದೆ, ಮದೆ ಗ್ರಾಮ ಪಂಚಾಯಿತಿಯ ೨.೪ ಕಿ.ಮೀ. ಈಶಾನ್ಯದಲ್ಲಿ ಭೂಕಂಪದ ಕೇಂದ್ರ ಬಿಂದು ಕೇಂದ್ರೀಕೃತವಾಗಿತ್ತು. ಈ ಭೂಕಂಪದ ದೂರ ವ್ಯಾಪ್ತಿ ಹೀಗಿದೆ: ಮಡಿಕೇರಿ ನಗರದಿಂದ ಈಶಾನ್ಯ ದಿಕ್ಕಿನ ೪.೦ ಕಿ.ಮೀ. ದೂರದಲ್ಲಿ, ಗಾಳಿಬೀಡು ಪಂಚಾಯಿತಿಗೆ ಸೇರಿದ ಎರಡನೇ ಮೊಣ್ಣಂಗೇರಿಯಿAದ ಆಗ್ನೇಯ ದಿಕ್ಕಿನ ೪.೫ ಕಿ.ಮೀ. ದೂರದಲ್ಲಿ ಹಾಗೂ ಕುಶಾಲನಗರ ತಾಲೂಕು ಹಾರಂಗಿ ಅಣೆಕಟ್ಟು ವೀಕ್ಷಣಾಲಯದಿಂದ ನೈಋತ್ಯ ದಿಕ್ಕಿನ ೨೩.೮ ಕಿ.ಮೀ. ದೂರದಲ್ಲಿ ಈ ಭೂಕಂಪ ಸಂಭವಿಸಿದೆ.
ನಕ್ಷೆಯ ಪ್ರಕಾರ, ಭೂಕಂಪದ ತೀವ್ರತೆ ಕಡಿಮೆಯಿತ್ತು ಮತ್ತು ಭೂಕಂಪದ ಕೇಂದ್ರ ಬಿಂದುವಿನಿAದ ಗರಿಷ್ಠ ೧೫-೨೦ ಕಿ.ಮೀ. ದೂರದವರೆಗೆ ಕಂಪನದ ಅನುಭವವಾಗಿರಬಹುದು. ಈ ರೀತಿಯ ಭೂಕಂಪವು ಸ್ಥಳೀಯ ನಿವಾಸಿಗಳಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ, ಆದರೂ ಸ್ಥಳೀಯವಾಗಿ ಸ್ವಲ್ಪ ಕಂಪನ ಕಂಡುಬರಬಹುದು. ಈಗಿನ ಭೂಕಂಪದ ಕೇಂದ್ರಬಿAದುವು ಅತಿ ಕಡಿಮೆ ಭೂಕಂಪದ ವಲಯದಲ್ಲಿ ಸಂಭವಿಸಿದೆ. ಹಾಗಾಗಿ ಇದರಿಂದ ಉಂಟಾಗುವ ಹಾನಿಯ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೆ, ‘ಟೆಕ್ಟೋನಿಕ್’ ನಕ್ಷೆಯ ಪ್ರಕಾರ ಕೇಂದ್ರಬಿAದುವು ಯಾವುದೇ ಹಾನಿಗೀಡು ಮಾಡುವ ಸಾಧ್ಯತೆಯೂ ಕಡಿಮೆ. ಭೂಕಂಪದ ತೀವ್ರತೆ ಕಡಿಮೆಯಿದ್ದು ಮತ್ತು ವಿನಾಶಕಾರಿಯಲ್ಲದ ಕಾರಣ ಜನ ಸಮುದಾಯವು ಭಯಭೀತರಾಗುವ ಅಗತ್ಯವಿಲ್ಲ ಎಂದು ತಾಂತ್ರಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮದೆನಾಡು ನಿವಾಸಿ ಇಬ್ರಾಹಿಂ ಅವರ ಪ್ರಕಾರ ಇಂದು ಬೆಳಿಗ್ಗೆ ಮದೆನಾಡು, ಜೋಡುಪಾಲ ಮತ್ತು ಹತ್ತಿರದ ಮೊಣ್ಣಂಗೇರಿ ಗ್ರಾಮಗಳಲ್ಲಿ ಹಠಾತ್ ಕಂಪನ ಸಂಭವಿಸಿದ ಸಮಯದಲ್ಲಿ ಗ್ರಾಮಸ್ಥರು ಆಘಾತಕ್ಕೊಳಗಾದರು. ಈ ಎಲ್ಲಾ ಗ್ರಾಮಗಳಲ್ಲಿ ೨೦೧೮ ರಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಹಾನಿ ಸಂಭವಿಸಿತ್ತು, ಅಲ್ಲದೆ, ಇದರ ಪರಿಣಾಮವಾಗಿ ಅನೇಕ ಸಾವು ನೋವುಂಟಾಗಿತ್ತು. ಆ ದುರಂತದ ಅನುಭವ ಇನ್ನೂ ಕೂಡ ಗ್ರಾಮಸ್ಥರಲ್ಲಿ ಮಾಸಿಲ್ಲ. ಇದರಿಂದಾಗಿ ಇಂದಿನ ಪ್ರಾಕೃತಿಕ ಭೂಕಂಪನ ಜನರಲ್ಲಿ ಆತಂಕವುAಟುಮಾಡಿತ್ತು. ಗ್ರಾಮಸ್ಥರ ಪ್ರಕಾರ ಬೆಳಗಿನ ಜಾವ ಮೂರು ಬಾರಿ ಕಂಪನದ ಅನುಭವವಾಗಿದೆ.