ಮಡಿಕೇರಿ, ಮಾ. ೨೧: ದಕ್ಷಿಣ ಭಾರತದ ಭೂಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ (PಗಿSಒ, ಂಗಿSಒ) ಇವರು ತಾ.೨೪ರಂದು ಸೋಮವಾರ ಕೊಡಗಿಗೆ ಆಗಮಿಸಲಿದ್ದಾರೆ. ಅಂದು ಮಡಿಕೇರಿಯಲ್ಲಿರುವ ಕ್ರಿಸ್ಟಲ್ ಕೋರ್ಟ್ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕೊಡಗು ಜಿಲ್ಲಾ ನಿವೃತ್ತ ಸೈನಿಕರು, ವಿಧವೆಯರು ಹಾಗೂ ಅವರ ಅವಲಂಭಿತರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ ಹಾಗೂ ಅವರು ನಿವೃತ್ತ ಸೈನಿಕರು, ವಿಧವೆಯರು ಮತ್ತು ಅವಲಂಭಿತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರೊಂದಿಗೆ ಇತರ ಹಿರಿಯ ಅಧಿಕಾರಿಗಳು ಮತ್ತು ದಕ್ಷಿಣ ಭಾರತದ ಸೇನಾ ವಿಭಾಗದ ಆಡಳಿತ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಬರಲಿದ್ದಾರೆ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಹಾಗೂ ಇತರರು ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ದಕ್ಷಿಣ ಭಾರತದ ಹಲವಾರು ಮುಖ್ಯ ಕಚೇರಿಗಳಿಂದ ಅಧಿಕಾರಿಗಳು ಮಾಜಿ ಸೈನಿಕರ ಮತ್ತು ಅವಲಂಭಿತರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಲಿದ್ದು, ಹಾಗೆಯೇ ಮಾಜಿ ಸೈನಿಕರಿಗೆ ವ್ಯಕ್ತಿಯ ಜೀವನದಲ್ಲಿ ಮುಂದುವರೆಯಲು ಹಲವಾರು ಹುದ್ದೆಗಳ ವಿಷಯಗಳನ್ನು ಸ್ಥಳದಲ್ಲೇ ವಿವರಿಸಲಾಗುವುದು.
ಕೊಡಗಿನ ಎಲ್ಲಾ ನಿವೃತ್ತ ಸೈನಿಕರು, ವಿಧವೆಯರು ಮತ್ತು ಅವಲಂಭಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅವರವರ ಕುಂದುಕೊರತೆ ಗಳನ್ನು ಮತ್ತು ಅಹವಾಲುಗಳನ್ನು ನೇರವಾಗಿ ತಿಳಿಸಿ ಸಮಾವೇಶದ ಸದುಪಯೋಗವನ್ನು ಪಡೆಯಬೇಕಾಗಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘವು ವಿನಂತಿಸುವುದಾಗಿ ಅವರು ತಿಳಿಸಿದರು.
ಹೆಚ್ಚಿನ ವಿವರಕ್ಕಾಗಿ ಮೊ.೯೮೪೫೩೩೧೪೩೧ ಮೇ|| ಓ.ಎಸ್. ಚಿಂಗಪ್ಪ, ಗೌರವ ಕಾರ್ಯದರ್ಶಿ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಇವರನ್ನು ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ಪದಾಧಿಕಾರಿಗಳು, ಅಗ್ರಿಮನೆ ವಾಸಪ್ಪ, ಕುಟ್ಟಂಡ ನಂದ ಮಾದಪ್ಪ, ನಾಟೋಳಂಡ ಸುರೇಶ್, ನಾಚಪ್ಪ, ಮುತ್ತಣ್ಣ ಹಾಜರಿದ್ದರು.
ಕ್ಯಾಂಟೀನ್ ಮಾಹಿತಿ
ಮಡಿಕೇರಿಯಲ್ಲಿ ತಾ. ೨೪ರ ಸೋಮವಾರ ನಡೆಯುವ ಯೋಧರ ಹೊರವಲಯ/ ಸಂಪರ್ಕ ರ‍್ಯಾಲಿ) ನಡೆಯುವುದರಿಂದ ಮಡಿಕೇರಿ ಕ್ಯಾಂಟೀನ್‌ನಲ್ಲಿ ಮದ್ಯ ಮಾರಾಟ ಇರುವುದಿಲ್ಲ. ಬದಲಾಗಿ ರ‍್ಯಾಲಿ ನಡೆಯುವ ಸ್ಥಳ ಕ್ರಿಸ್ಟಲ್‌ಹಾಲ್, ಹಿಲ್‌ಡೇಲ್ ರೆಸಾರ್ಟ್ನಲ್ಲಿ ದಿನಸಿ ಸಾಮಗ್ರಿಗಳ ಮಾರಾಟ ಮಾತ್ರ ಇರುತ್ತದೆ ಎಂದು ಕ್ಯಾಂಟೀನ್‌ನ ಹಿರಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.