ಮಡಿಕೇರಿ, ಮಾ.೨೧: ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಇಂದಿನಿAದ ಆರಂಭಗೊAಡಿದ್ದು, ಪ್ರಥಮ ದಿನದ ಕನ್ನಡ ಪರೀಕ್ಷೆಯನ್ನು ಒಟ್ಟು ೬೪೪೪ ಮಂದಿ ಬರೆದಿದ್ದಾರೆ. ೧೬೧ ಮಂದಿ ಗೈರು ಹಾಜರಾಗಿದ್ದಾರೆ.
ಮಡಿಕೇರಿ ಬ್ಲಾಕ್‌ನಲ್ಲಿ ೧೮೧೯, ಸೋಮವಾರಪೇಟೆಯಲ್ಲಿ ೨೭೫೦ ಹಾಗೂ ವೀರಾಜಪೇಟೆ ಬ್ಲಾಕ್‌ನಲ್ಲಿ ೨೦೩೬ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೬೬೦೫ ಮಂದಿ ಪರೀಕ್ಷೆಗೆ ನೋಂದಾಯಿಸಿಕೊAಡಿದ್ದರು. ಈ ಪೈಕಿ ಮಡಿಕೇರಿಯಲ್ಲಿ ೧೭೯೭, ಸೋಮವಾರಪೇಟೆಯಲ್ಲಿ ೨೬೬೪ ಹಾಗೂ ವೀರಾಜಪೇಟೆಯಲ್ಲಿ ೧೯೮೩ ಮಂದಿ ಸೇರಿದಂತೆ ಒಟ್ಟು ೬೪೪೪ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಡಿಕೇರಿಯಲ್ಲಿ ೨೨, ಸೋಮವಾರಪೇಟೆಯಲ್ಲಿ ೮೬ ಹಾಗೂ ವೀರಾಜಪೇಟೆಯಲ್ಲಿ ೫೩ ಸೇರಿದಂತೆ ೧೬೧ ಮಂದಿ ಗೈರು ಹಾಜರಾಗಿರುವುದಾಗಿ ಶಾಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.